ನಮ್ಮ ನಾಯಕರು ಎಲ್ಲವನ್ನೂ ಗಮನಿಸಿದ್ದಾರೆ: ಹಿರಿಯರನ್ನ ಕೈಬಿಡ್ತಾರೆ ಅನ್ನೋದು ಗಾಳಿಸುದ್ದಿ- ಸಚಿವ ಗೋವಿಂದ ಕಾರಜೋಳ. ಬಾಗಲಕೋಟೆ,ಡಿಸೆಂಬರ್,9,2022(..):ಗುಜರಾತ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿ ಮತ್ತೆ ಅಧಿಕಾರದ ಗದ್ದುಗೆಗೇರಿದ್ದು ಚುನಾವಣೆಯಲ್ಲಿ ಯುವಕರಿಗೆ ಮಣೆ ಹಾಕಿದ್ದೇ ಬಿಜೆಪಿಗೆ ವರವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಹಿರಿಯರಿಗೆ ಕೋಕ್ ಕೊಟ್ಟು ಯುವಕರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನಮ್ಮ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಹಿರಿಯರನ್ನ ಕೈಬಿಡ್ತಾರೆ ಅನ್ನೋದು ಗಾಳಿಸುದ್ದಿ. ಹಿರಿಯರನ್ನ ಕೈಬಿಡಲ್ಲ. ಅಂತಹ ಯಾವುದೇ ಪ್ರಕ್ರಿಯೆ ನಮ್ಮಲ್ಲಿ ನಡೆದಿಲ್ಲ. ಬದಲಾವಣೆ ಮಾಡುವ ಅನಿವಾರ್ಯತೆ ಬಂದರೇ. ಬದಲಾವಣೆ ಮಾಡುತ್ತಾರೆ ಎಂದಿದ್ದಾರೆ. : – - –- - .