ಗಡಿ ವಿವಾದ: ಮುಂದಿನ 48 ಗಂಟೆಗಳಲ್ಲಿ ಪ್ರಕರಣ ಬಗೆಹರಿಸದಿದ್ದರೇ ನಾನೇ ಬೆಳಗಾವಿಗೆ ಹೋಗ್ತೇನೆ ಎಂದ ಎನ್​ ಸಿಪಿ ನಾಯಕ ಶರದ್ ಪವಾರ್ ಮುಂಬೈ ,ಡಿಸೆಂಬರ್,6,2022(..):ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಕ್ಯಾತೆ ಹಿನ್ನೆಲೆ ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮಹಾರಾಷ್ಟ್ರ ಲಾರಿಗಳಿಗೆ ಮಸಿ ಬಳಿದು ಕಲ್ಲು ತೂರಾಟ ನಡೆಸಿದ್ದಕ್ಕೆ ಎನ್​ಸಿಪಿ ನಾಯಕ ಶರದ್ ಪವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಡಿ ವಿವಾದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಶರದ್ ಪವಾರ್, “ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಸರ್ಕಾರ ಈ ಪ್ರಕರಣವನ್ನ ಬಗೆಹರಿಸಬೇಕು. ಇಲ್ಲವಾದರೇ, ನಾನೇ ಬೆಳಗಾವಿಗೆ ಹೋಗುತ್ತೇನೆ” ಎಂದಿದ್ದಾರೆ. ಕರ್ನಾಟಕ ಸಿಎಂ ಹೇಳಿಕೆಯಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿ ವಿಚಾರವಾಗಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಮುಂದಿನ 24 ಗಂಟೆಯಲ್ಲಿ ಶಾಂತ ವಾತಾವರಣ ನಿರ್ಮಾಣ ಮಾಡಿ. ಇಲ್ಲದಿದ್ದರೆ ನಾವೂ ತಾಳ್ಮೆ ಕಳೆದುಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿಗೆ ಶರದ್ ಪವಾರ್ ತಿಳಿಸಿದ್ದಾರೆ. : -- - – – – 48