ಉದ್ಯಮಿ ಅಪಹರಿಸಲು ಯತ್ನ: ಮೈಸೂರಿನಲ್ಲಿ ಐವರ ಬಂಧನ… ಮೈಸೂರು,ಡಿಸೆಂಬರ್,5,2022(..):ಉದ್ಯಮಿಯೊಬ್ಬರನ್ನ ಅಪಹರಿಸಲು ಯತ್ನಿಸಿದ್ದ ಐವರು ಅಪಹರಣಕಾರರನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿಯ ಲಾರಿ ಡ್ರೈವರ್ ಹಾಗೂ ಸಹಚರರಿಂದ ಅಪಹರಣ ಯತ್ನ ಕೃತ್ಯ ನಡೆದಿದೆ. ಹಣಕ್ಕೆ ಬೇಡಿಕೆ ಇಡುವ ಸಲುವಾಗಿ ಉದ್ಯಮಿಯೊಬ್ಬರನ್ನ ಅಪಹರಿಸಲು ಬಂಧಿತ ಐವರು ಪ್ಲಾನ್​ ರೂಪಿಸಿದ್ದರು. ಅಂತೆಯೇ ಬೆಂಗಳೂರು-ಮೈಸೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಸಿಗ್ನಲ್ ಬಳಿ ಅಪಹರಣಕ್ಕೆ ವಿಫಲ ಯತ್ನ ನಡೆಸಿದ್ದರು. ಈ ಕುರಿತು ನರಸಿಂಹ ರಾಜ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣ ಭೇದಿಸಿ ಐವರು ಅರೋಪಿಗಳನ್ನು ನಗರದ ನರಸಿಂಹರಾಜ ಠಾಣಾ ಪೋಲಿಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಹುಂಡೈ ಕಾರು, 1 ದ್ವಿಚಕ್ರ ವಾಹನ, 3 ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. : – – - - – .