ಬೆಳಗಾವಿ ಎರಡು ರಾಜ್ಯಗಳ ಯುದ್ಧರಂಗವಲ್ಲ: ಶಾಂತಿ ಕದಡಲು ಬಿಡುವುದಿಲ್ಲ- ಗೃಹ ಸಚಿವ ಅರಗ ಜ್ಞಾನೇಂದ್ರ. ಬೆಂಗಳೂರು,ಡಿಸೆಂಬರ್,5,2022(..):ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಬೇಳಗಾವಿ ಜಿಲ್ಲೆ ಸದ್ಯಕ್ಕೆ ಶಾಂತವಾಗಿದೆ. ಜಿಲ್ಲೆಯಲ್ಲಿ ಶಾಂತಿ ಕದಡಲು ಅವಕಾಶ ನೀಡುವುದಿಲ್ಲ. ಬೆಳಗಾವಿ ಎರಡು ರಾಜ್ಯಗಳ ಯುದ್ದರಂಗ ಅಲ್ಲ. ನೆಲೆ, ಜಲ ಕಾಪಾಡುವ ದೃಷ್ಠಿಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಭಾವನಾತ್ಮಕವಾಗಿ ಕೆರಳಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ . ಸಿಎಂ ಬೊಮ್ಮಾಯಿ ಜೊತೆ ಚರ್ಚೆ ಮಾಡುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. : – – - –- - - .