ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ರಾಜಸ್ಥಾನ ಪ್ರವೇಶ ಬೆಂಗಳೂರು, ಡಿಸೆಂಬರ್ 04, 2022 (..):ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೊಡೊ ಯಾತ್ರೆ ಇಂದು ಮಧ್ಯಪ್ರದೇಶದ ಮೂಲಕ ರಾಜಸ್ಥಾನ ಪ್ರವೇಶಿಸಲಿದೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರು ರಾಜಸ್ಥಾನದ ನಾಯಕರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಯಾತ್ರೆ ಮುಂದುವರೆಸುವ ಜವಾಬ್ದಾರಿ ಮಾಡಲಿದ್ದಾರೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಇಂದು ಸಂಜೆಯಿಂದ ರಾಹುಲ್ ಯಾತ್ರೆ ಅಬ್ಬರಿಸಲಿದೆ. ಕಳೆದ 12 ದಿನಗಳಿಂದ ಮಧ್ಯಪ್ರದೇಶದಲ್ಲಿ ರಾಹುಲ್‍ಗಾಂಧಿ 380 ಕಿಲೋ ಮೀಟರ್ ಸಂಚರಿಸಿದ್ದಾರೆ. ಅಂದಹಾಗೆ ಭಾರತ್ ಜೊಡೊ ಯಾತ್ರೆ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿತ್ತು. ಇಂದಿಗೆ 88 ದಿನಗಳಾಗಿದ್ದು, ಕಾಶ್ಮೀರದವರೆಗೂ ಯಾತ್ರೆ ಮುಂದುವರೆಯಲಿದೆ.