ಕೋರ್ಟ್ ದಯೆಯಿಂದ ಬಿಎಸ್ ವೈ ಬದುಕಿದ್ದಾರೆ: 82ನೇ ವಯಸ್ಸಿನಲ್ಲಿ ಇದು ಬೇಕಿತ್ತಾ? ಸಿಎಂ ಸಿದ್ದರಾಮಯ್ಯ ಗರಂ ಮೈಸೂರು,ಆಗಸ್ಟ್,7,2024 (..):ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ನೀಡಬೇಕು ಎಂಬ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಗರಂ ಆದ ಘಟನೆ ನಡೆಯಿತು. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನ್ಯಾಯಾಲಯದ ದಯೇಯಿಂದ ಯಡಿಯೂರಪ್ಪ ಬದುಕಿದ್ದಾರೆ. ಫೋಕ್ಸೋ ಕೇಸ್ ನಲ್ಲಿ ಅವರು ಜೈಲು ಸೇರಬೇಕಿತ್ತು. 82 ನೇ ವಯಸ್ಸಿನಲ್ಲಿ ಇದು ಬೇಕಿತ್ತಾ.? ಒಂದು ಚಿಕ್ಕ ಹೆಣ್ಣು ಮಗುವಿನ ಮೇಲೆ ಈ ರೀತಿ ಮಾಡಬೇಕಿತ್ತಾ.? ಎಂದು ಕಿಡಿಕಾರಿದರು. ನನ್ನ‌ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ. ಅವರು ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದಲಿ ಎನ್ನುವ ಮೂಲಕ ಬಿಎಸ್ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಬೆಂಕಿ ಉಗುಳಿದರು. ಇನ್ನು ಸಿಎಂ ಸಿದ್ದರಾಮಯ್ಯ ಮೈಸೂರಿನ ನಿವಾಸದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು. : , , ,