ಬೆಂಗಳೂರಿನಿಂದ ಹೊರಗೆ ಹಾರಲಿದ್ದೀರಾ? ಹಾಗಾದ್ರೆ ನಿಮ್ಮ ಮುಖವೇ ನಿಮ್ಮ ಗುರುತು ಹಾಗೂ ಟಿಕೆಟ್.. ಬೆಂಗಳೂರು, ಡಿಸೆಂಬರ್ ,2, 2022 (..):ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸ್ಥಳೀಯ ಪ್ರಯಾಣಿಕರು ಸಂಪರ್ಕರಹಿತ, ಕಾಗದರಹಿತ ಚೆಕ್-ಇನ್ ಹಾಗೂ ಬೋರ್ಡಿಂಗ್ ಪ್ರಕ್ರಿಯೆಯ ಅನುಭವವನ್ನು ನೀಡುವಂತಹ ಭಾರತದ ಕೇವಲ ಮೂರು ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಗುರುವಾರದಂದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಬೆಂಗಳೂರು, ದೆಹಲಿ ಹಾಗೂ ವಾರಣಾಸಿ ವಿಮಾನನಿಲ್ದಾಣಗಳಲ್ಲಿ ಮುಖವನ್ನು ಗುರುತಿಸುವ ಬಯೊಮೆಟ್ರಿಕ್ಸ್ ಆಧಾರಿತ ‘ಡಿಜಿಯಾತ್ರಾ,’ ಎಂಬ ಹೆಸರಿನ ಡಿಜಿಟಲ್ ಪ್ರಯಾಣದ ವ್ಯವಸ್ಥೆಗೆ ಚಾಲನೆ ನೀಡಿತು. ಏರ್ ಇಂಡಿಯಾ, ವಿಸ್ತಾರಾ ಹಾಗೂ ಏರ್‌ ಏಷ್ಯಾಗಳನ್ನು ವ್ಯಾಪಿಸುವ ಡಿಜಿಯಾತ್ರಾದ ಬೀಟಾ ಆವೃತ್ತಿಯನ್ನು ಆಗಸ್ಟ್ 15ರಂದು ನಗರದ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಲಾಗಿತ್ತು. ಈ ವ್ಯವಸ್ಥೆಯಡಿ ಪ್ರಯಾಣಿಕರು, ಸಿಂಗಲ್-ಟೋಕನ್ ಮುಖದ ಬಯೋಮೆಟ್ರಿಕ್ಸ್ ಅನ್ನು ಬಳಸಿಕೊಂಡು ಭದ್ರತಾ ಪ್ರವೇಶದ್ವಾರಗಳನ್ನು ದಾಟಿ, ವಿಮಾನಗಳನ್ನು ಏರಬಹುದಾಗಿದೆ. ಸರಳವಾಗಿ ಹೇಳುವುದಾದರೆ, ಪ್ರಯಾಣಿಕರು ಇನ್ನು ಮುಂದೆ ತಮ್ಮ ಗುರುತಿನ ದಾಖಲಾತಿಗಳು ಹಾಗೂ ಬೋರ್ಡಿಂಗ್ ಪಾಸ್‌ ಗಳನ್ನು ತೋರಿಸಬೇಕಾಗಿಲ್ಲ. ಅವರ ಮುಖವೇ ಅವರ ಗುರುತಾಗಿರುತ್ತದೆ. ವಿಮಾನವನ್ನು ಹತ್ತುವ ಒಟ್ಟಾರೆ ಅವಧಿಯನ್ನು ಮಹತ್ತರವಾದ ಮಟ್ಟಿಗೆ ಕಡಿಮೆಗೊಳಿಸುವುದು ಈ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶವಾಗಿದೆ. ಗುರುವಾರದಂದು ಬಿಡುಗಡೆಗೊಳಿಸಿದ ಈ ವಿನೂತನ ತಂತ್ರಜ್ಞಾನದ ನಂತರ ನಾಲ್ಕು ವಿಮಾನಯಾನ ಸಂಸ್ಥೆಗಳು (ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ ಹಾಗೂ ಏರ್‌ ಏಷ್ಯಾ) ಇವುಗಳು ಡಿಜಿಯಾತ್ರಾದ ಭಾಗವಾಗಿವೆ. ಸ್ಪೈಸ್‌ ಜೆಟ್, ಗೋ ಫಸ್ಟ್ ಹಾಗೂ ಇತರೆ ಸಣ್ಣ ವಿಮಾನಯಾನ ಸಂಸ್ಥೆಗಳು ಈ ಸಾಲಿಗೆ ಇನ್ನೂ ಸೇರ್ಪಡೆಯಾಗಬೇಕಿದೆ, ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್)ದ ಮೂಲಗಳು ತಿಳಿಸಿವೆ. ಈ ಡಿಜಿಯಾತ್ರಾ ಆ್ಯಪ್ ಈ ಮುಂಚೆ ಗೂಗಲ್ ಪ್ಲೇ ನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಆ್ಯಪಲ್ ಆ್ಯಪ್ ಸ್ಟೋರ್‌ ನಲ್ಲಿಯೂ ಲಭ್ಯವಿದೆ. ಬಿಐಎಎಲ್ ಪ್ರಕಾರ ಈ ವಿನೂತನ ಬಯೋಮೆಟ್ರಿಕ್ ದತ್ತಾಂಶವನ್ನು ಪ್ರಯಾಣಿಕರ ದೃಢೀಕರಣ ಹಾಗೂ ತಪಾಸಣೆಗೆಗಾಗಿ ಮಾತ್ರ ಬಳಸಲಾಗುತ್ತದೆ, ಅವರ ಗುರುತಿಗಾಗಿ ಅಲ್ಲ. ಕಾರ್ಯನಿರ್ವಹಣೆ ಹೇಗೆ? ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್ : - - – –