ಬಿಜೆಪಿಗೆ ಕುಸ್ತಿ ಮಾಡಲು ಜನರಿಲ್ಲ: ಹೀಗಾಗಿ ಸೇರಿಸಿಕೊಳ್ಳುತ್ತಿದ್ದಾರೆ, ಸೆರಿಸಿಕೊಳ್ಳಲಿ- ಡಿ.ಕೆ ಶಿವಕುಮಾರ್ ವ್ಯಂಗ್ಯ. ಬೆಂಗಳೂರು,ಡಿಸೆಂಬರ್,1,2022(..):ಬಿಜೆಪಿ ಪಕ್ಷಕ್ಕೆ ರೌಡಿ ಶೀಟರ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ಬಿಜೆಪಿಗೆ ಕುಸ್ತಿ ಮಾಡಲು ಜನರಿಲ್ಲ ಹೀಗಾಗಿ ಕುಸ್ತಿ ಮಾಡಲು ಸೇರಿಸಿಕೊಳ್ಳುತ್ತಿದ್ದಾರೆ. ಸೇರಿಸಿಕೊಳ್ಳಲಿ. ಬಿಜೆಪಿಯವರು ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲ್ಲ. ಜನರ ಭಾವನೆ ಮೇಲೆ ರಾಜಕೀಯ ಮಾಡೊದು ಬಿಜೆಪಿ ಸಿದ್ದಾತ . ಜನರಿಗೆ ಒಳ್ಳೆಯದು ಮಾಡಬೇಕು ಎನ್ನುವುದು ಕಾಂಗ್ರೆಸ್ ಸಿದ್ಧಾಂತ ಎಂದರು. : -- --