ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ: ಹೆಚ್ ವಿಶ್ವನಾಥ್ ಜೊತೆಗಿನ ಒಡನಾಟ ಮೆಲುಕು ಹಾಕಿದ ಮಾಜಿ ಸಿಎಂ ಸಿದ್ಧರಾಮಯ್ಯ. ಮೈಸೂರು,ನವೆಂಬರ್,30,2022(..):ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಆರ್ ಎಸ್ ಎಸ್ ಬಿಡುವುದಿಲ್ಲ. ಆರ್ ಎಸ್ ಎಸ್ ಹೆಸರು ಹೇಳಿ ಬಿಜೆಪಿಯನ್ನು ದೂರವಿಡಿ ಎಂದು ವಿಪಕ್ಷ ನಾಯಕ ಸಿದ‍್ಧರಾಮಯ್ಯ ಕಿಡಿಕಾರಿದರು. ಮೈಸೂರಲ್ಲಿಂದು ಆಯೋಜಿಸಿದ್ದ ಕನಕ ಜಯಂತಿ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ , ಆರ್ ಎಸ್ ಎಸ್ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬಿಡುವುದಿಲ್ಲ. ಅಸಮಾನತೆ ಇಲ್ಲದಿದ್ದರೆ ಅವರು ಶೋಷಣೆ ಮಾಡಲು ಸಾಧ್ಯವಿಲ್ಲ. ಮುಸ್ಲಿಂಮರನ್ನು ಬಿದರು ಗೊಂಬೆಯಂತೆ ಬಳಸಿಕೊಂಡು ಆಟವಾಡುತ್ತಿದ್ದಾರೆ. ನೀವು ಇಂದು ಬದಲಾಗಬೇಕಿದೆ . ಸುಮ್ಮನೆ ಕನಕ ದಾಸರಿಗೆ ಹಾರ ಹಾಕಿ ಹೊರಟರೆ ಸಾಧ್ಯವಿಲ್ಲ. ಆರ್ ಎಸ್ ಎಸ್ ದೇಶ ಭಕ್ತರನ್ನು ಹುಟ್ಟು ಹಾಕುವ ಸಂಸ್ಥೆ ಎಂದು ಸುಳ್ಳು ಹೇಳುತ್ತಾರೆ . ಇವರಲ್ಲಿ ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಆರ್ ಎಸ್ ಎಸ್ ನ ಯಾರು ತ್ಯಾಗ ಬಲಿದಾನದಲ್ಲಿ ಪಾಲ್ಗೊಂಡಿದ್ದಾರೆ.ನೀವೆಲ್ಲರು ಇದನ್ನು ಅರಿತು ಬದಲಾಗಬೇಕಿದೆ. ಆರ್ ಎಸ್ ಎಸ್ ಹೆಸರು ಹೇಳಿ ಬಿಜೆಪಿಯನ್ನು ದೂರವಿಡಿ ಎಂದರು. ಇದೇ ವೇಳೆ ಹೆಚ್ ವಿಶ್ವನಾಥ್ ಜೊತೆಗಿನ ಒಡನಾಟ ಮೆಲುಕು ಹಾಕಿದ ಸಿದ್ಧರಾಮಯ್ಯ, ಹಿಂದೆ ಕುರುಬ ಎಂದು ಹೇಳಿಕೊಳ್ಳಲು ವಿದ್ಯಾರ್ಥಿಗಳು ಹಿಂಜರಿಯುದ್ದರು. ನಾನು ಮತ್ತು ವಿಶ್ವನಾಥ್ ಎಲ್ಲಾ ಕಾಲೇಜುಗಳನ್ನು ಸಂಚರಿಸಿ ನಮ್ಮ ಸಮುದಾಯದ ವಿದ್ಯಾರ್ಥಿಗಳನ್ನು ಸಂಘಟಿಸಿ ಕಾಳಿದಾಸ ವಿದ್ಯಾರ್ಥಿ ಸಂಘ ಮಾಡಿದ್ದೆವು. ನಾನು ಅಧ್ಯಕ್ಷನಾಗಿದ್ದೆ ವಿಶ್ವನಾಥ್ ಜನರಲ್ ಸೆಕ್ರೆಟರಿ ಆಗಿದ್ದ. ನಾನು ಲಾಯರ್ ಆದ ಮೇಲೆ ವಿಶ್ವನಾಥ್ ಅಧ್ಯಕ್ಷನಾದ ಎಂದು ತಿಳಿಸಿದರು. ಸಿದ್ದರಾಮಯ್ಯ ಭಾಷಣ ಸಂಪುಟಗಳಲ್ಲಿ ಹೊರಬರಬೇಕು- ಸಾಹಿತಿ ಅರವಿಂದ ಮಾಲಗತ್ತಿ‌ ಸಾಹಿತಿ ಅರವಿಂದ ಮಾಲಗತ್ತಿ ಮಾತನಾಡಿ, ‌ ಕನಕದಾಸರ ಜಯಂತಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಎರೆಡನ್ನ ಒಟ್ಟಿಗೆ ಆಚರಣೆ ಮಾಡಲಾಗಿದೆ. 75 ನೇ ವರ್ಷಕ್ಕೆ 75 ತೂಕದ ಕೇಕ್ ಕಟ್ ಮಾಡಿದ್ದಾರೆ. ಕನಕ ದಾಸರು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಕನಕದಾಸರ ಜಯಂತಿ ಆರಂಭ ಮಾಡಿದ್ದು ಸಿದ್ದರಾಮಯ್ಯ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಆಲೋಚನೆಯ ಪಲ್ಲಟವಾಗಿದೆ. ಸಿದ್ದರಾಮಯ್ಯ ಸ್ವಾಭಿಮಾನದ ಪ್ರತೀಕ. ಅನ್ನವಿಲ್ಲದೆ ಬದುಕಬಹುದು ಸ್ವಾಭಿಮಾವಿಲ್ಲದೆ ಬದುಕಲಾರದು. ಸಿದ್ದರಾಮಯ್ಯ ಸಾಕಷ್ಟು ಟೀಕೆಗಳನ್ನ ಎದುರಿಸುತ್ತಿದ್ದಾರೆ. ಕೆಳ ಸಮುದಾಯದವರು ಹೇಗೆ ಬದುಕಬೇಕು ಎಂಬುದನ್ನ ತೋರಿಸಿದ್ದಾರೆ. ಸಿದ್ದರಾಮಯ್ಯ ಭಾಷಣಗಳು ಸಂಗ್ರಹವಾಗಿ ಹೊರಬರಬೇಕು. ಕೆಲವೊಂದು ಮಾತುಗಳು ಸಿದ್ದರಾಮಯ್ಯ ಮಾತ್ರ ಹೇಳಲು ಸಾಧ್ಯ. ಸಿದ್ಧರಾಮಯ್ಯ ಜಾತಿ ವ್ಯವಸ್ಥೆಯಲ್ಲಿ ತಾತ್ವಿಕವಾದ ಮನೋಭಾವನೆ ಹೊಂದಿದ್ದಾರೆ. ಸಿದ್ದರಾಮಯ್ಯ ಭಾಷಣ ಸಂಪುಟಗಳಲ್ಲಿ ಹೊರಬರಬೇಕು ಎಂದರು. ಯಾವುದೇ ಒಂದು ಧರ್ಮದಿಂದ ಸಂವಿಧಾನ ಉಳಿವು ಸಾಧ್ಯವಿಲ್ಲ. ಸಂತ ಸಾಹಿತ್ಯದಿಂದ ಸಂವಿಧಾನದ ಉಳಿವು ಸಾಧ್ಯ. ಎಲ್ಲಾ ಧರ್ಮದಲ್ಲೂ ಸಂತರಿದ್ದಾರೆ. ಎಲ್ಲಾ ಸಂತರ ಸಾಹಿತ್ಯಗಳನ್ನು ಪುನರುಜ್ಜೀವನ ಗೊಳಿಸಬೇಕು. ಸಿದ್ದರಾಮಯ್ಯನವವರು ಅಧಿಕಾರಕ್ಕೆ ಬಂದರೆ ಈ ನಿಟ್ಟಿನಲ್ಲಿ‌ ಕ್ರಮ ವಹಿಸಬೇಕು ಎಂದು ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿ ನುಡಿದರು. : - - –- …. . , 30, 2022 (..): “ ’ . ,” . . , , “ ’ . ’ . . . . . ? ? . .” . , . “ . . . , . ,” . , -. “ , ’ -. . . . . . ,” .: / / /