ಒಕ್ಕಲಿಗರ ಮೀಸಲಾತಿ ಆಗ್ರಹ ವಿಚಾರ: ಡೆಡ್ ಲೈನ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ- ಸಿಎಂ ಬೊಮ್ಮಾಯಿ. ಮೈಸೂರು,ನವೆಂಬರ್,28,2022(..):ಒಕ್ಕಲಿಗರ ಮೀಸಲಾತಿ ಆಗ್ರಹ ವಿಚಾರ ಸಂಬಂಧ, ಡೆಡ್ ಲೈನ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅವರ ಲೆಟರ್ ನನ್ನ ಕೈ ಸೇರಲಿ. ನಾನು ಮುಂದೆ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನನಗೆ ರಾಜಕೀಯ ಒತ್ತಡ ಇರುವುದು ಸತ್ಯ. ‌ ನಾನು ಎಲ್ಲಾ ಪಕ್ಷಗಳ ಹಿತ ಕಾಯಬೇಕಿದೆ. ಆ ಕಾರಣಕ್ಕೆ ನಾನು ಎಲ್ಲಾ ರೀತಿಯ ಆಲೋಚನೆ ಮಾಡಬೇಕಾಗುತ್ತದೆ ಎಂದರು. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರದ ತಯಾರಿ ನಡೆಸುತ್ತಿದೆ. ನನ್ನೊಂದಿಗೆ ಕೇಂದ್ರದಿಂದ ಯಾರೂ ಸಮಾಲೋಚನೆ ಮಾಡಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಬೇಕೆಂದು ನಮ್ಮ ಪಕ್ಷದ 30 ವರ್ಷಗಳ ನಿಲುವು. ಈ ಬಗ್ಗೆ ನಾನು ಸಹ ಎಲ್ಲಾ ರೀತಿಯ ಮಾಹಿತಿ ಕಲೆ ಹಾಕುತ್ತಿದ್ದೇನೆ. ಈ ಬಗ್ಗೆ ಮುಂದಿನ‌ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ನ.30 ರಂದು ಮಹಾರಾಷ್ಟ್ರ ಗಡಿ ವಿಚಾರ ತೀರ್ಪು ಹಿನ್ನಲೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಂಜೆ ದೆಹಲಿ ಪ್ರಯಾಣ ಬೆಳೆಸಲಿದ್ದು ಈ ಕುರಿತು ಪ್ರತಿಕ್ರಿಯಿಸಿದ ಅವರು, ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಪೂರ್ವ ಚರ್ಚೆಯನ್ನ ನಡೆಸುತ್ತೇನೆ. ಅದರ ಜೊತೆಗೆ ಬೇರೆ ಬೇರೆ ವಿಚಾರಗಳು ಚರ್ಚೆಯಾಗಯತ್ತೆ ಎಂದರು. : -- - - … : – , 28, 2022 (..): , . “ ,” . , , “ . . , .”“ . . , . ’ 30 . . ,” . 30 - . , .: / / / /