ಬಾಣಂತಿ ಡಿಸ್ಚಾರ್ಜ್ ಗೆ ಲಂಚ ಕೇಳಿದ್ದ ಮಹಿಳಾ ವೈದ್ಯರು ಸಸ್ಪೆಂಡ್. ರಾಮನಗರ,ನವೆಂಬರ್,26,2022(..):ಬಾಣಂತಿ ಡಿಸ್ಚಾರ್ಜ್ ಮಾಡಲು 6 ಸಾವಿರ ರೂ. ಲಂಚ ಕೇಳಿದ್ದ ಮಹಿಳಾ ವೈದ್ಯರನ್ನ ರಾಮನಗರ ಡಿಎಚ್ ಒ ಡಾ. ಕಾಂತರಾಜು ಅಮಾನತು ಮಾಡಿ ಆದೇಶಿಸಿದ್ದಾರೆ. ಬಿಡದಿ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞೆ ಶಶಿಕಲಾ, ಡಾ.ಐಶ್ವರ್ಯ ಅಮಾನತುಗೊಂಡವರು. ಬಾಣಂತಿ ರೂಪ ಅವರ ಬಳಿ ಡಿಸ್ಚಾರ್ಜ್ ಮಾಡಲು ವೈದ್ಯೆ ಶಶಿಕಲಾ ಅವರು 6 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ತಕ್ಷಣ ಎಚ್ಚೆತ್ತ ರಾಮನಗರ ಡಿಎಚ್ ಒ ಡಾ. ಕಾಂತರಾಜು ಅವರು , ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಶಿಕಲಾ, ಡಾ.ಐಶ್ವರ್ಯರನ್ನ ಅಮಾನತು ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಇದು ಬಹಳ ವಿಷಾದದ ಸಂಗತಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೀವೆ. ಭ್ರಷ್ಟಾಚಾರ ಎಲ್ಲಾ ಕ್ಷೇತ್ರದಲ್ಲೂ ಇದೆ. ಅದನ್ನ ತೊಡೆದು ಹಾಕಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದರು. : - – – – -