ಎಫೆಕ್ಟ್ : ಮೈಸೂರಲ್ಲಿ ” ದೈವದ” ಪೈಪೋಟಿ..! ಮೈಸೂರು, ನವೆಂಬರ್,25,2022(..):ನಟ ರಿಷಬ್‌ ಶೆಟ್ಟಿ ಅಭಿನಯದ ‘ಕಾಂತಾರ’ ಸಿನಿಮಾ ರಾಜ್ಯ ದೇಶದಲ್ಲೇ ಅಲ್ಲದೇ ಇಡೀ ವಿಶ್ವದಾದ್ಯಂತ ಸದ್ದು ಮಾಡಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡು ಈ ಸಿನಿಮಾ ಈಗ ಓಟಿಟಿಯಲ್ಲೂ ರಿಲೀಸ್ ಆಗಿದೆ. ಈ ಮಧ್ಯೆ ಕಾಂತಾರ ಚಿತ್ರದ ಎಫೆಕ್ಟ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಟ್ಟಿದ್ದು ದೈವದ ಹೆಸರಿನಲ್ಲಿ ದೇವಸ್ಥಾನಗಳು ತಲೆ ಎತ್ತಿ ಪೈಪೋಟಿಗಿಳಿದಿವೆ. ಹೌದು, ಅರಮನೆ ನಗರಿ ಮೈಸೂರಿನ ಕೇರ್ಗಳ್ಳಿಯಲ್ಲಿ ಕೊರಗಜ್ಜ ಮತ್ತು ರಾಜ ದೈವ ಗುಳಿಗ ದೇಗುಲಗಳು ತಲೆ ಎತ್ತಿದ್ದು ಪರಸ್ಪರ ಪೈಪೋಟಿಗೆ ಬಿದ್ದಿವೆ. ಕೊರಗಜ್ಜನ ದೇವಸ್ಥಾನಕ್ಕೆ ಪೈಪೋಟಿ ನೀಡಲು ಅದರ ಸಮೀಪದಲ್ಲೇ ಕೇವಲ 10 ದಿನಗಳ ಹಿಂದೆ ರಾಜದೈವ ಗುಳಿಗ ದೇಗುಲವನ್ನ ನಿರ್ಮಾಣ ಮಾಡಲಾಗಿದೆ. ದೇಗುಲಕ್ಕೆ ಕಿಕ್ಕಿರಿದು ಭಕ್ತ ಸಾಗರ ಹರಿದು ಬರುತ್ತಿದ್ದು ಈ ದೇಗುಲದಲ್ಲಿ ಮೂಲ ಆಚರಣೆಗಳನ್ನ ಬದಿಗೊತ್ತಿ ಪೂಜೆ ಪುನಸ್ಕಾರ ನಡೆಸಲಾಗುತ್ತಿದೆ. ತೆಂಗಿನಕಾಯಿ ,ಕರ್ಪೂರ,‌ ನಿಂಬೆ ಹಣ್ಣು ನೀಡಿ‌ ಪೂಜೆ ಮಾಡಲಾಗುತ್ತಿದೆ. ಈ ಮೂಲಕ ಮೂಲ ಆಚರಣೆ, ಸಂಪ್ರದಾಯಗಳಿಗೆ ಧಕ್ಕೆ ತರುತ್ತಿರುವ ಆರೋಪ ಕೇಳಿಬಂದಿದೆ. ಕೊರಗಜ್ಜ ದೇವಸ್ಥಾನದ ಅರ್ಚಕರಿಗೆ ಬ್ಲಾಕ್ ಮೇಲ್‌.. ಕೊರಗಜ್ಜ ದೇವಸ್ಥಾನದ ಅರ್ಚಕ ತೇಜುಕುಮಾರ್ ಅವರಿಗೆ ಬ್ಲಾಕ್ ಮೇಲ್ ಕರೆಗಳು ಬರುತ್ತಿದ್ದು, ಹಣ ನೀಡದಿದ್ದರೆ ಮಾನಹಾನಿ ಮಾಡುವ ಎಚ್ಚರಿಕೆ ನೀಡುತ್ತಿದ್ದಾರಂತೆ. ಅಲ್ಲದೆ ಪೊಲೀಸರ ಮೂಲಕವೂ ಕೆಲವರು ಅರ್ಚಕ ತೇಜುಕುಮಾರ್ ಗೆ ಹೆದರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ತೇಜುಕುಮಾರ್, ಕಾಂತಾರ ಸಿನಿಮಾದ ಬಳಿಕ ನಾವು ದೈವ ನಿರ್ಮಿಸಿಲ್ಲ. ನಮಗೆ ಹಣ ಮಾಡುವ ಉದ್ದೇಶ ಇಲ್ಲ. ನಮ್ಮ ಕೊರಗಜ್ಜ ದೇವಸ್ಥಾನ ನೋಡಿ ಪಕ್ಕದಲ್ಲಿ ನಿರ್ಮಿಸಿದ್ದಾರೆ. ನಮ್ಮನ್ನ ಕೆಲವರು ಹಣ ನೀಡುವಂತೆ ಪೀಡುತ್ತಿದ್ದಾರೆ. ನೀಡದೆ ಇದ್ದ ಕಾರಣಕ್ಕೆ ತೇಜೋವಧೆ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. : - -- - … : ‘ ’ …!, 25, 2022 (..): , , 50 . , . , . , ! , . 10 , . . , . , , . , . . .“ . . ( ) . . ’ ,” .: / / / /