ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ: ಗಾಂಜಾ ಹಾಗೂ ಇಬ್ಬರು ವಶಕ್ಕೆ. ಯಾದಗಿರಿ,ನವೆಂಬರ್,24,2022(..):ಶಹಾಪುರ ಹಾಗೂ ಸುರಪುರ ವಿಭಾಗದ ಅಬಕಾರಿ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ 4 ಕಡೆ ದಾಳಿ ನಡೆಸಿ ಗಾಂಜಾ ಬೆಳೆದಿದ್ದ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ. ವಿವಿಧ ಕಡೆ ಗಾಂಜಾ ಬೆಳೆದ ಜಮೀನುಗಳ ಮೇಲೆ ಇಂದು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಉಳ್ಳೇಸುಗುರದಲ್ಲಿ 3 ಕಡೆ, ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಒಂದು ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ 3 ಕೆಜಿ ಒಣ ಗಾಂಜಾ, 3 ಕೆಜಿ ಹಸಿ ಗಾಂಜಾ ಜಪ್ತಿ ಮಾಡಿ ಇಬ್ಬರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. : -- - - -.