ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ. ಬೆಂಗಳೂರು,ನವೆಂಬರ್,23,2022(..):ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯುವ ಬಗ್ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಿದ್ಧರಾಮಯ್ಯ, ಬಿಜೆಪಿಯವರು ಈ ರೀತಿ ಮಾಡುವುದನ್ನ ನೋಡಿದರೇ ಪಾರದರ್ಶಕ ಚುನಾವಣೆ ಸಾಧ್ಯವಾ..? ಎಂಬ ಆಂತಕ ಶುರುವಾಗಿದೆ. ಪ್ರಕರಣ ಗಂಭೀರವಾಗಿದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಲಘುವಾಗಿ ಮಾತನಾಡುತ್ತಾರೆ. ಮಾತೆತ್ತಿದ್ದರೇ ನಿಮ್ಮ ಅವಧಿಯಲ್ಲಿ ಆಗಿರಲಿಲ್ವಾ ಅಂತಾರೆ. ಬಿಜೆಪಿಯವರಿಗೆ ಅಂಟು ರೋಗ ಬಂದಿದೆ ಎಂದು ಕಿಡಿಕಾರಿದರು. : - – – – - .