ಮೈಸೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 43 ವರ್ಷಗಳ ಕಠಿಣ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದ ಕೋರ್ಟ್. ಮೈಸೂರು,ನವೆಂಬರ್,23,2022(..):ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 43 ವರ್ಷಗಳ ಕಠಿಣ ಶಿಕ್ಷೆ, ₹ 50 ಸಾವಿರ ದಂಡ ವಿಧಿಸಿ ನಗರದ ಪೊಕ್ಸೊ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. ಅಪರಾಧಿಯು ಬಿಹಾರ ಮೂಲದವನಾಗಿದ್ದು, ವಿಶೇಷ ಕೋರ್ಟ್​ನ ನ್ಯಾಯಾಧೀಶೆ ಶೈಮಾ ಕಮರೋಜ್ ಈ ತೀರ್ಪು ನೀಡಿದ್ದಾರೆ. ಸಂತ್ರಸ್ತೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು. 2021ರಲ್ಲಿ 10 ವರ್ಷದ ಬಾಲಕಿ ಮೇಲೆ ಆರೋಪಿಯು ನಿರಂತರ ಅತ್ಯಾಚಾರ ಎಸಗಿದ್ದ. ಮೈಸೂರಿನ ಟಿ.ನರಸೀಪುರ ರಸ್ತೆಯ ಫಾರಂಹೌಸ್ ನಲ್ಲಿ ಕೃತ್ಯವೆಸಗಿದ್ದ. ಮೈಸೂರು ಗ್ರಾಮಾಂತರ ಮಹಿಳಾ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. : - - –-43 –-- … : 43 , .50k , 23, 2022 (..): 43 , . 50,000 . ’ . .. . 10-- 2021, . . ’ .: / 10 / / 43