ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನ ಕಾಲಿಗೆ ಗುಂಡೇಟು. ಬೆಂಗಳೂರು,ನವೆಂಬರ್,23,2022(..):ಪೊಲೀಸರ ಮೇಲೆಯೇ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ನೆಲಮಂಗಲದ ದಾನೋಜಿಪಾಳ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ನೆಲಮಂಗಲದ ದರೋಡೆಕೋರ ಯೋಗಾನಂದ ಅಲಿಯಾಸ್ ನೈಟ್​ಶಿಫ್ಟ್​ ಯೋಗಿ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳ ಮಹಜರು ಮಾಡುವ ವೇಳೆ ಆರೋಪಿಯ ಯೋಗಾನಂದ ಪೊಲೀಸರ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಲು ಮುಂದಾಗಿದ್ಧ. ಈ ವೇಳೆ ಯೋಗಾನಂದ ಕಾಲಿಗೆ ಪೊಲೀಸರು ಗುಂಡು ಹಾರಿಸಿದರು ಈ ಸಮಯದಲ್ಲಿ ಕಾನ್ಸ್‌ ಟೆಬಲ್ ಹನುಮಂತ ಹಿಪ್ಪರಗಿ ಅವರ ಕೈಗಳಿಗೆ ಗಾಯವಾಗಿದೆ. ನೆಲಮಂಗಲ ಟೌನ್ ಪೊಲೀಸ್ ಇನ್ಸ್ ಪೆಕ್ಟರ್ ಶಶಿಧರ್‌ ರಿಂದ ಗುಂಡು ಹಾರಿಸಿ ಬಂಧಿಸಿದರು. ಆರೋಪಿಯ ಮೇಲೆ 18 ಪ್ರಕರಣಗಳಿವೆ. : - - – - – .