/ ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಕಾಳಗವೇ ಸಾಕ್ಷಿ- ರಾಜ್ಯ ಕಾಂಗ್ರೆಸ್ ಟಾಂಗ್. ಮೈಸೂರು,ನವೆಂಬರ್,16,2022(..):ಮೈಸೂರಿನಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಘಟಕ ಟಾಂಗ್ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ ರಾಮದಾಸ್ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ. ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು ತಮ್ಮ ಮನೆಯ ಕಾವಲಿಯ ತೂತುನ್ನು ನೋಡಿಕೊಂಡರೆ ಒಳಿತು ಎಂದು ಟೀಕಿಸಿದೆ. ಹಿಂದೆ ಬ್ಯಾರಿಕೆಡ್ ಮುರಿದಿದ್ದ ಸಂಸದ ಪ್ರತಾಪ್ ಸಿಂಹ ಈಗ ಮೈಸೂರಿನ ಬಸ್ ನಿಲ್ದಾಣ ಒಡೆಯುತ್ತೇನೆ ಎನ್ನುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಜೆಸಿಬಿ ನುಗ್ಗಿಸುತ್ತೇನೆ ಎನ್ನುವ ಸಂಸದರ ಮನೆಗೆ ಜೆಸಿಬಿ ನುಗ್ಗಿಸಬೇಕು, ಏಕೆಂದರೆ, ಸಾರ್ವಜನಿಕ ಆಸ್ತಿ ಹಾನಿಪಡಿಸುವವರ ಆಸ್ತಿ ಮಟ್ಟುಗೋಲು ಹಾಗೂ ಜೆಸಿಬಿ ನುಗ್ಗಿಸುವುದು ಇವರದ್ದೇ ಪಕ್ಷದ ಆಗ್ರಹಗಳಲ್ಲವೇ? ಎಂದು ರಾಜ್ಯಕಾಂಗ್ರೆಸ್ ಕಿಡಿಕಾರಿದೆ. : - - - - - … ‘’ : . / , 16, 2022 (..): ‘’ . , . . . “ . ,” .“ , . . . , , ’ ,” .: / /