ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡೇ ಕೋಲಾರಕ್ಕೆ ಸ್ಪರ್ಧೆಗೆ ಬನ್ನಿ-ಸಿದ್ಧರಾಮಯ್ಯಗೆ ಕೆ.ಎಚ್ ಮುನಿಯಪ್ಪ ಸಲಹೆ. ಕೋಲಾರ,ನವೆಂಬರ್,16,2022(..):ಕೋಲಾರದಲ್ಲಿ ಸ್ಪರ್ಧೆಸುವ ಬಗ್ಗೆ ಸಿದ್ಧರಾಮಯ್ಯ ಸುಳಿವು ನೀಡಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ಧರಾಮಯ್ಯಗೆ ಕಾಂಗ್ರೆಸ್ ನಾಯಕ ಕೆ.ಎಚ್ ಮುನಿಯಪ್ಪ ಮಹತ್ವದ ಸಲಹೆ ನೀಡಿದ್ದಾರೆ. ಹೌದು, ಕೋಲಾರದಲ್ಲಿ ಸಮಸ್ಯೆ ಇದೆ. ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡೇ ಕೋಲಾರಕ್ಕೆ ಸ್ಪರ್ಧೆಗೆ ಬನ್ನಿ ಎಂದು ಸಲಹೆ ನೀಡುತ್ತೇನೆ ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಕೆಎಚ್ ಮುನಿಯಪ್ಪ, ಕೋಲಾರದಲ್ಲಿ ಸಮಸ್ಯೆ ಇದೆ. ಮೂಲ ಕಾಂಗ್ರೆಸ್ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ . ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡು ಬಂದರೇ ಕೋಲಾರಕ್ಕೆ ಬಂದರೆ ಸ್ಪರ್ಧೆಗೆ ಅನುಕೂಲ. ಬಿಜೆಪಿ ಪರ ಇದ್ದವರನ್ನ ನಂಬಿದರೇ ಕೋಲಾರದಲ್ಲಿ ಗೆಲ್ಲಲ್ಲ. ಸಮಸ್ಯೆ ಸರಿಪಡಿಸಿಕೊಂಡೇ ಬನ್ನಿ ಎಂದು ಸಲಹೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. : – – –- – - -.