ಡಿಕೆಶಿ ಗೊಡ್ಡು ಬೆದರಿಕೆಗೆ ಹೆದರಲ್ಲ: ನನ್ನ ಬಗ್ಗೆ ಏನು ಬಿಚ್ಚಿಡುತ್ತರೋ ಬಿಚ್ಚಿಡಲಿ- ಕೇಂದ್ರ ಸಚಿವ ಹೆಚ್.ಡಿಕೆ ರಾಮನಗರ,ಆಗಸ್ಟ್,5,2024 (..):ಡಿಕೆ ಶಿವಕುಮಾರ್ ಅವರ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ನನ್ನ ಬಗ್ಗೆ ಏನು ಬಿಚ್ಚಿಡುತ್ತರೋ ಬಿಚ್ಚಿಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ತಪ್ಪು ಮಾಡಿರುವುದು ನಾವ‍ಲ್ಲ ಅವರು. ಕಳೆದ 3 ದಿನದಿಂದ ಕುಮಾರಸ್ವಾಮಿ ಗುಣಗಾನ ಮಾಡುತ್ತಿದ್ದಾರೆ. ಜನಾಂದೋಲನದಲ್ಲಿ ರಾಜ್ಯದ ಜನರ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಕುಮಾರಸ್ವಾಮಿ ಗುಣಗಾನ ಮಾಡ್ತಿದ್ದಾರೆ..! ಇದಕ್ಕೆ ಏನು ಹೇಳೋದು..? ಎಂದು ಕಿಡಿಕಾರಿದರು. ಯಾದಗಿರಿಯಲ್ಲಿ ಪಿಎಸ್ ಐ ಪರಶುರಾಮ್ ಪತ್ನಿ ಕಣ್ಣೀರಿಡುತ್ತಿದ್ದಾರೆ. ಆದರೆ ಮೃತ ಪಿಎಸ್ ಐ ಪತ್ನಿಗೆ ನ್ಯಾಯ ಕೊಡಿಸಲು ಸರ್ಕಾರಕ್ಕೆ ಆಗಿಲ್ಲ. ಈ ಸರ್ಕಾರ ಆಕೆಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ಹೆಚ್ ಡಿಕೆ ಹೇಳಿದರು. : , , , .