ಸಾಹಿತಿ ಎಸ್.ಎಲ್ ಭೈರಪ್ಪ ಮತ್ತು ಕೆ.ಎಸ್ ರಂಗಪ್ಪ ಸೇರಿ ಮೂವರಿಗೆ ಮೈಸೂರು ವಿವಿ ಭಾರತ ರತ್ನ ಶತಮಾನೋತ್ಸವ ಪದವಿ. ಮೈಸೂರು,ನವೆಂಬರ್,11,2022(..): ಸಾಹಿತಿ ಎಸ್.ಎಲ್ ಭೈರಪ್ಪ ಸೇರಿ ಮೂವರಿಗೆ ಮೈಸೂರು ವಿವಿ ಭಾರತ ರತ್ನ ಶತಮಾನೋತ್ಸವ ಪದವಿಯನ್ನ ನೀಡಲು ತಜ್ಞರ ಸಮಿತಿ ನಿರ್ಧರಿಸಿದೆ. ಮೈಸೂರು ವಿಶ್ವವಿದ್ಯಾನಿಲಯವು 2016ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿದ್ದು, ಇದರ ಸವಿನೆನಪಿಗಾಗಿ ಮೈಸೂರು ವಿಶ್ವವಿದ್ಯಾನಿಲಯವು ಶತಮಾನೋತ್ಸವ ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯ ಭಾರತ ರತ್ನ ಶತಮಾನೋತ್ಸವ ಪದವಿಯನ್ನು ನೀಡುತ್ತಿದೆ. 2022ರ ಮೈಸೂರು ವಿಶ್ವವಿದ್ಯಾನಿಲಯ ಭಾರತ ರತ್ನ ಶತಮಾನೋತ್ಸವ ಪದವಿಗಳನ್ನು ಈ ಕೆಳಕಂಡ ಮಹನೀಯರುಗಳಿಗೆ ನೀಡಲು ತಜ್ಞರ ಸಮಿತಿಯು ತೀರ್ಮಾನಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಭಾರತ ರತ್ನ ಶತಮಾನೋತ್ಸವ ಪದವಿಗಳು ವಿಜ್ಞಾನ, ತಂತ್ರಜ್ಞಾನ ಹಾಗೂ ಸಾಮಾಜಿಕ ವಿಜ್ಞಾನದಲ್ಲಿ ಖ್ಯಾತರಾಗಿರುವಂತಹ ಮಹನೀಯರುಗಳಿಗೆ ನೀಡುವಂತದ್ದಾಗಿದೆ. : – – – - .