ಚುನಾವಣೆ ಸಮೀಪ ಹಿನ್ನೆಲೆ ಮೋದಿ ಬೆಂಗಳೂರಿಗೆ ಭೇಟಿ- ಪ್ರಿಯಾಂಕ್ ಖರ್ಗೆ ಟೀಕೆ. ಬೆಂಗಳೂರು,ನವೆಂಬರ್,10,2022(..):ಪ್ರಧಾನಿ ಮೋದಿಗೆ ಚುನಾವಣೆಯದ್ಧೇ ಚಿಂತೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು. ಈ ಕುರಿತು ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಮೋದಿ ಅವರು 24 ಗಂಟೆ ಚುನಾವಣೆ ಬಗ್ಗೆಯೇ ಚಿಂತೆ ಮಾಡ್ತಾರೆ. ಗುಜರಾತ್ ನಲ್ಲಿ 2 ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಮೋದಿ ಅವರು ಚುನಾವಣೆ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಚುನಾವಣೆ ಹತ್ತಿರ ಬರುತ್ತಿದೆ ಚುನಾವಣೆ ಹಿನ್ನೆಲೆ ಮೋದಿ ಭೇಟಿ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. : - - –- .