ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿ ಎತ್ತಿ ಹಿಡಿದ ಸುಪ್ರೀಂಕೋರ್ಟ್. ನವದೆಹಲಿ,ನವೆಂಬರ್.7,2022(..):ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ. 10 ರಷ್ಟು ಮೀಸಲಾತಿ ವಿಚಾರ ನೀಡುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಐವರು ನ್ಯಾಯಮೂರ್ತಿಗಳ ಪೈಕಿ ಮೂವರು ನ್ಯಾಯಮೂರ್ತಿಗಳು ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ , ನ್ಯಾ ತ್ರಿವೇದಿ, ನ್ಯಾ ಪಾರ್ದಿವಾಲ ಅವರು ಪರ ತೀರ್ಪು ನೀಡಿದ್ದಾರೆ. ಆರ್ಥಿಕ ಮೀಸಲಾತಿ ಸಂವಿಧಾನ ಉಲ್ಲಂಘನೆ ಅಲ್ಲ. ಕೋಟಾದಿಂದ ಸಂವಿಧಾನದ ಆಶಯ ಉಲ್ಲಂಘನೆಯಾಗಲ್ಲ. ತಾರತಮ್ಯದಿಂದ ಕೂಡಿಲ್ಲ. ಎಸ್ ಸಿ ಮತ್ತು ಎಸ್ ಟಿ, ಹಿಂದುಳಿದವರಿಗೆ ಮೀಸಲಾತಿ ಇದೆ. ಆರ್ಥಿಕವಾಗಿ ಹಿಂದುಳಿದವರಿಗೂ ಮೀಸಲಾತಿ ಅವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಸರ್ಕಾರ ಶಿಕ್ಷಣ ಉದ್ಯೋಗಕ್ಕೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10 ಮೀಸಲಾತಿ ನೀಡಿದ್ದು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದೆ. : –-10% – - … . 10% , 7, 2022 (..): ’ , 10% ’ . , . “ . . . . , . 10% . . ’ . .: / / /