ಕಾಂಗ್ರೆಸ್ ನವರಿಗೆ ಸೋನಿಯಾ ಗಾಂಧಿ ಅವರದ್ಧೇ ಧ್ಯಾನ: ದೇಶದ ಬಗ್ಗೆ ಧ್ಯಾನ ಮಾಡಲ್ಲ- ಪ್ರಹ್ಲಾದ್ ಜೋಶಿ ವ್ಯಂಗ್ಯ. ಧಾರವಾಡ,ನವೆಂಬರ್,5,2022(..):ಶಾಲೆಗಳಲ್ಲಿ 10 ನಿಮಿಷ ಧ್ಯಾನ ಮಾಡುವುದನ್ನ ಜಾರಿಗೆ ತರಲು ಮುಂದಾಗಿರುವ ಸರ್ಕಾರದ ನಡೆಯನ್ನ ಟೀಕಿಸಿದ ಕಾಂಗ್ರೆಸ್ ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯದ್ಧೇ ಧ್ಯಾನ ಭಾರತದ ಬಗ್ಗೆ ಕಾಂಗ್ರೆಸ್ ಧ್ಯಾನ ಮಾಡಲ್ಲ. ಇಟಲಿಯ ಧ್ಯಾನ ಒಂದು ಗೊತ್ತು. ಶಾಲೆಗಳಲ್ಲಿ ಇಂಥದ್ದೇ ದೇವರ ಧ್ಯಾನ ಮಾಡಬೇಕು ಎಂಬುದಲ್ಲ. ಭಗವತ್ಗೀತೆಯನ್ನ ಕಾಂಗ್ರೆಸ್ ನವರು ವಿರೋಧ ಮಾಡ್ತಾರೆ. ತ್ರಿವಳಿ ತಲಾಖ್ ಆದೇಶವನ್ನು ವಿರೋಧಿಸಿದರು. ಯೋಗ ಕಡ್ಡಾಯ ಮಾಡಿದಾಗಲೂ ವಿರೋಧಿಸಿದರು. ಬಿಜೆಪಿಯವರು ಏನೇ ಮಾಡಿದರೂ ವಿರೋಧಿಸುತ್ತಾರೆ. ಕಾಂಗ್ರೆಸ್ ನವರು ತಮಗೆ ಯಾವ ಧ್ಯಾನ ಬೇಕೊ ಅದನ್ನೇ ಮಾಢಿಕೊಳ್ಳಲಿ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು. : - - –