ಹಳೇ ಗಂಡನ ಪಾದವೇ ಗತಿ ಎನ್ನುವಂತಾಗಿದೆ- ಡಿಕೆಶಿ ಆಹ್ವಾನಕ್ಕೆ ಸಚಿವ ಬಿ.ಸಿ ಪಾಟೀಲ್ ಟಾಂಗ್. ಬೆಂಗಳೂರು,ನವೆಂಬರ್,3,2022(..):ವಲಸಿಗರಿಗೆ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಆಹ್ವಾನ ನೀಡಿದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಸಚಿವ ಬಿ.ಸಿ ಪಾಟೀಲ್ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಬಿ.ಸಿ ಪಾಟೀಲ್, ಕಾಂಗ್ರೆಸ್ ಗೆ ಹೋಗುವ ಜರೂರತ್ತು ನಮಗೆ ಇಲ್ಲ. ಈಗಾಗಲೇ ಡೈವರ್ಸ್ ತೆಗೆದುಗೊಂಡು ಬಂದಾಗಿದೆ. ಒಡೆದು ಹೋದ ಹಾಲು ಮನಸ್ಸು ಮತ್ತೆ ಒಂದಾಗಲ್ಲ ಮತ್ತೆ ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ನಲ್ಲಿ ಕ್ಯಾಂಡಿಡೇಟ್ ಇಲ್ಲ. ಹೀಗಾಗಿ ಕಾಂಗ್ರೆಸ್ ಗೆ ಹಳೆಗಂಡನ ಪಾದವೇ ಗತಿ ಎನ್ನುವಂತಾಗಿದೆ. ನಾವು ಬಿಜೆಪಿಯಲ್ಲಿ ಚೆನ್ನಾಗಿ ಇದ್ದೇವೆ ಎಂದು ಬಿಸಿ ಪಾಟೀಲ್ ತಿಳಿಸಿದರು. : - –- –