ಬಿಜೆಪಿಯವರು ಒಂದೇ ಒಂದು ಮನೆ ಹಂಚಿಕೆ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ- ಸಚಿವ ಜಮೀರ್ ಅಹ್ಮದ್ ಸವಾಲು ರಾಮನಗರ,ಆಗಸ್ಟ್,3,2024 (..):ನಮ್ಮ ಸರ್ಕಾರದ ಅವಧಿಯಲ್ಲಿ ಸುಮಾರು 2ಲಕ್ಷ ಮನೆ ಹಂಚಿಕೆ ಮಾಡಲಾಗಿದೆ. ಬಿಜೆಪಿಯವರು ಒಂದೇ ಒಂದು ಮನೆ ಕೊಟ್ಟಿದ್ದೇವೆ ಅಂದರೆ ನಾನು ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು. ರಾಮನಗರದಲ್ಲಿ ಇಂದು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಹೆಚ್.ಡಿ ಕುಮಾರಸ್ವಾಮಿ ಸತ್ಯಹರಿಶ್ಚಂದ್ರ ರೀತಿ ಮಾತನಾಡುತ್ತಾರೆ. 2004ರಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರ ಆಸ್ತಿ ಎಷ್ಟಿತ್ತು. 1800 ಕೋಟಿ ರೂ. ಎಲ್ಲಿಂದ ಬಂತು ಇದಕ್ಕೆ ಉತ್ತರಿಸಲಿ. ಸಿಎಂ ಸಿದ್ದರಾಮಯ್ಯ ಮುಂದೆ ಹೆಚ್.ಡಿಕೆ ಆಟ ನಡೆಯಲ್ಲ ಎಂದು ಟಾಂಗ್ ಕೊಟ್ಟರು. : , , , , , ,