ವಿದ್ಯುತ್ ತಂತಿ ಮೇಲಿದ್ದ ವಸ್ತು ತೆಗೆಯಲು ಹೋದಾಗ ಶಾಕ್ ಹೊಡೆದು ವ್ಯಕ್ತಿ ಸಾವು. ಹಾಸನ,ನವೆಂಬರ್,2,2022(..):ವಿದ್ಯುತ್ ತಂತಿ ಮೇಲಿದ್ದ ವಸ್ತು ತೆಗೆಯಲು ಹೋದಾಗ ಶಾಕ್ ಹೊಡೆದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಉದಯಗಿರಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮಲ್ಲಪ್ಪ ಮೃತಪಟ್ಟ ವ್ಯಕ್ತಿ. ಮನೆ ಮುಂದೆ ಹಾದುಹೋಗಿದ್ದ ವಿದ್ಯುತ್ ತಂತಿ ಮೇಲೆ ಬಿದ್ದು ವಸ್ತು ತೆಗೆಯಲು ಮಲ್ಲಪ್ಪ ಮುಂದಾಗಿದ್ದಾರೆ. ನೆಲ ಒರೆಸುವ ಮಾಪ್ ಬಳಸಿ ತಂತಿ ಮೇಲಿದ್ದ ವಸ್ತು ತೆಗೆಯಲು ಮುಂದಾಗಿದ್ದು ಈ ವೇಳೆ ವಿದ್ಯುತ್ ಶಾಕ್ ಹೊಡೆದು ಮಲ್ಲಪ್ಪ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - –-