ಮೈಸೂರು ದಸರಾ ಮಹೋತ್ಸವದ ಖರ್ಚು ವೆಚ್ಚದ ಲೆಕ್ಕ ಮಂಡಿಸಿದ ಸಚಿವ ಎಸ್.ಟಿ ಸೋಮಶೇಖರ್. ಮೈಸೂರು,ನವೆಂಬರ್,1,2022(..):ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಾಗೂ ಜಂಬೂ ಸವಾರಿ ಮೆರವಣಿಗೆ ಅದ‍್ಧೂರಿಯಾಗಿ ನೆರವೇರಿತು. ಮೈಸೂರು ದಸರಾ ಮುಗಿದು ಒಂದು ತಿಂಗಳು ಕಳೆಯುತ್ತಿದ್ದು ಈ ನಡುವೆ ಇಂದು ದಸರಾದಲ್ಲಿ ಆದ ಖರ್ಚು ವೆಚ್ಚದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ನೀಡಿದರು. 2022 ನೇ ಸಾಲಿನ ದಸರಾ ಮಹೋತ್ಸವದ ಖರ್ಚು,ವೆಚ್ಚದ ಲೆಕ್ಕವನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಂಡಿಸಿದರು. ಮೂಡಾದಿಂದ 10 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ, ಅರಮನೆ ಆಡಳಿತ ಮಂಡಳಿಯಿಂದ 5 ಕೋಟಿ, ಪ್ರಯೋಜಕತ್ವದಿಂದ 32 ಲಕ್ಷದ 50 ಸಾವಿರ, ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 76 ಲಕ್ಷ ಸೇರಿದಂತೆ ಒಟ್ಟು 31 ಕೋಟಿ, 8 ಲಕ್ಷದ 88 ಸಾವಿರದ 819 ರೂ. ಸಂಗ್ರಹವಾಗಿದೆ. ಮೈಸೂರು ದಸರಾ ಮಹೋತ್ಸವಕ್ಕೆ ಒಟ್ಟು ಖರ್ಚು 26 ಕೋಟಿ, 54 ಲಕ್ಷದ 49 ಸಾವಿರದ 58 ರೂಗಳು. ಮಂಡ್ಯ, ಚಾಮರಾಜನಗರ ಮತ್ತು ಹಾಸನ ದಸರಾಕ್ಕೆ ಒಟ್ಟು ಖರ್ಚು 2 ಕೋಟಿ 20 ಲಕ್ಷ ಖರ್ಚಾಗಿದೆ. ಒಟ್ಟಾರೆ ಖರ್ಚು 28 ಕೋಟಿ, 74 ಲಕ್ಷದ 49 ಸಾವಿರದ 58 ರೂಗಳಾಗಿದೆ. ಉಳಿಕೆ ಹಣ ಒಟ್ಟು 2 ಕೋಟಿ, 34 ಲಕ್ಷದ 39 ಸಾವಿರದ 761 ರೂಗಳು ಉಳಿಕೆಯಾಗಿದೆ ಎಂದು ಮಾಹಿತಿ ನೀಡಿದರು. ಹಾಗೆಯೇ ಮತ್ತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಕ್ರೂಟ್ನಿ ಮಾಡಲು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೂಚನೆ ನೀಡಿದರು : - - – - … .. , 1, 2022 (..): . .. . . 31,08,88,819 2022, . 10 , . 15 , . 5 , . 32.50 , .76 . . 26,54,49,058 . . 2.20 , . ’ .28,74,49,058. . 2,34,39,761 , . .: / .. / / /