ಕನ್ನಡ ರಾಜ್ಯೋತ್ಸವ ಹಿನ್ನೆಲೆ: ನಮ್ಮ ಮೆಟ್ರೋದಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್. ಬೆಂಗಳೂರು,ಅಕ್ಟೋಬರ್,31,2022(..):ಕನ್ನಡ ರಾಜ್ಯೋತ್ಸವ ಅಂಗವಾಗಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ನೀಡಿದ್ದು, ಇನ್ಮುಂದೆ ಪ್ರಯಾಣಿಕರು ಮೊಬೈಲ್ ನಲ್ಲೇ ಮೆಟ್ರೋ ಪ್ರಯಾಣದ ಟಿಕೆಟ್​ ಖರೀದಿಸಲು ಅವಕಾಶ ನೀಡಲಾಗಿದೆ. ಹೌದು ನಾಳೆಯಿಂದ ನಮ್ಮ ಮೆಟ್ರೋ ಮತ್ತಷ್ಟು ಹೈಟೆಕ್ ಆಗಲಿದ್ದು, ಸಮಯ ಉಳಿತಾಯ, ಚಿಲ್ಲರೆ ಸಮಸ್ಯೆ ಬಗೆಹರಿಸಲು ನಾಳೆ (ನ.1) ರಿಂದ ಕ್ಯೂಆರ್​ ಕೋಡ್​ ಬಳಸಿ ಪ್ರವೇಶ, ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ಮೂಲಕ ಟಿಕಟ್ ಖರೀದಿಗೆ ಅವಕಾಶ ನೀಡಲಾಗಿದೆ. ಪ್ರಯಾಣ ಮಾರ್ಗ ನಮೂದಿಸಿ ಟಿಕೆಟ್ ಪಡೆಯಬಹುದು ನಾಳೆಯಿಂದ ಈ ಸೇವೆ ಆರಂಭಿಸಲು ಬಿಎಂಆರ್ ಸಿಎಲ್ ಮುಂದಾಗಿದೆ. ಟೋಕನ್, ಕಾರ್ಡ್ ಬದಲು ಕ್ಯೂಆರ್ ಕೋಡ್ ವ್ಯವಸ್ಥೆ ಬಳಸಲು ಮುಂದಾಗಿದೆ ಎನ್ನಲಾಗಿದೆ. : - - – .