ಇಂದು ನಟ ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಇದು ಅಪ್ಪು ವ್ಯಕ್ತಿತ್ವಕ್ಕೆ ನೀಡುತ್ತಿರುವ ಗೌರವ- ರಾಘವೇಂದ್ರ ರಾಜ್ ಕುಮಾರ್. ಬೆಂಗಳೂರು,ನವೆಂಬರ್,1,2022(..):ಇಂದು 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮವಾಗಿದ್ದು ಇಂದೇ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಸಹೋದರ ಪುನೀತ್ ರಾಜ್​ ಕುಮಾರ್ ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಇದು ಅಪ್ಪು ವ್ಯಕ್ತಿತ್ವಕ್ಕೆ ಸಿಗುತ್ತಿರುವ ಗೌರವ. ಇದು ಮರಣೋತ್ತರ ಅಲ್ಲ. ‘ಅವನ ನೆನಪು ಇರುವವರೆಗೂ ಪ್ರಶಸ್ತಿ ಬದುಕಿರುತ್ತದೆ. ಹಾಗಾಗಿ ಇದು ಮರಣೋತ್ತರ ಅಲ್ಲ’ ಎಂದು ರಾಘವೇಂದ್ರ ರಾಜ್ ಕುಮಾರ್ ಅವರು ಹೇಳಿದ್ದಾರೆ. ಅಪ್ಪು ಮಾಡಿದ ಸೇವೆ ಜೀವಂತವಿರುತ್ತದೆ. ಅಭಿಮಾನಿಗಳು ನಮ್ಮನ್ನ ಬೆಳೆಸಿದ್ದಾರೆ. ಅಭಿಮಾನಿಗಳಿಂದ ನಾವು . ಅಭಿಮಾನಿಗಳೇ ನಮ್ಮ ಸ್ಟಾರ್ ಎಂದು ರಾಘವೇಂದ್ರ ರಾಜ್ ಕುಮಾರ್ ನುಡಿದರು. ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಗೆ ಪ್ರಶಸ್ತಿ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಹಿರಿಯ ನಟ ರಜನಿಕಾಂತ್, ಜ್ಯೂ.ಎನ್ ಟಿಆರ್ ಮತ್ತು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಪಾಲ್ಗೊಳ್ಳಲಿದ್ದರೆ. : – –-- .