ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಆಕ್ಷೇಪಗಳಿಗೆ ಆಹ್ವಾನ ಬೆಂಗಳೂರು, ಅಕ್ಟೋಬರ್ 30, 2022 (..):ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಕಟಿಸಿದೆ. ಏಪ್ರಿಲ್‌ 1ರಿಂದ 15ರವರೆಗೆ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ವೇಳಾಪಟ್ಟಿಯ ಬಗ್ಗೆ ಆಕ್ಷೇಪಗಳನ್ನು ನವೆಂಬರ್‌ 28ರ ಒಳಗೆ ಸಲ್ಲಿಸಬೇಕಿದೆ. ಆಕ್ಷೇಪಗಳನ್ನು @. ಅಥವಾ ..@. ಅಥವಾ ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢಶಿಕ್ಷಣ ಪರೀಕಾ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-560003 ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬಹುದಾಗಿದೆ ಎಂದು ಮಂಡಳಿಯ ನಿರ್ದೇಶಕರು (ಪರೀಕ್ಷೆ) ತಿಳಿಸಿದ್ದಾರೆ. ವೇಳಾಪಟ್ಟಿವಿವರ:ಏ.1;ಪ್ರಥಮ ಭಾಷೆ, ಏ.4; ಗಣಿತ, ಸಮಾಜಶಾಸ್ತ್ರ, ಏ.6;ದ್ವಿತೀಯ ಭಾಷೆ, ಏ.8; ಅರ್ಥಶಾಸ್ತ್ರ, ಏ.10;ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಏ.12;ತೃತೀಯ ಭಾಷೆ, ಏ.15;ಸಮಾಜ ವಿಜ್ಞಾನ