ನಟ ಪುನೀತ್ ಸಾಧನೆ ಪಠ್ಯಕ್ಕೆ ಸೇರಿಸುವ ವಿಚಾರ: ಸಿಎಂ ಮತ್ತು ಶಿಕ್ಷಣ ಸಚಿವರಿಂದ ತೀರ್ಮಾನ- ಸಚಿವ ಆರ್.ಅಶೋಕ್. ಬೆಂಗಳೂರು,ಅಕ್ಟೋಬರ್,29,2022(..):ನಟ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್ ನಮ್ಮನ್ನಗಲಿ ಒಂದು ವರ್ಷವೇ ಕಳೆದಿದೆ. ಈ ನಡುವೆ ನಟ ಅಪ್ಪು ಜೀವನ ಸಾಧನೆಯನ್ನ ಶಾಲಾ ಪಠ್ಯ-ಪುಸ್ತಕದಲ್ಲಿಸೇರಿಸುವ ವಿಚಾರ ಮೊದಲ ಬಾರಿಗೆ ಪ್ರಸ್ತಾಪವಾಗಿದೆ. ಹೌದು. ನಟ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸುವ ವಿಚಾರದ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್​, ನಟ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸುವ ಬಗ್ಗೆ ಸಿಎಂ ಮತ್ತು ಶಿಕ್ಷಣ ಸಚಿವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಕೆಲವರ ಜೀವನ ಸಾಧನೆ ಸೇರಿಸಬೇಕು ಅಂದಾಗ ವಿಘ್ನ ಬರುತ್ತವೆ, ಆದರೆ, ಪುನೀತ್​ ಅಂಥವರಿಗೆ ಆ ರೀತಿ ಯಾವುದೇ ಅಡ್ಡಿ ಬರಲ್ಲ. ಹೀಗಾಗಿ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸಬೇಕು. ಮುಂದಿನ ವರ್ಷ ಪರಿಶೀಲನೆ ಮಾಡಿ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು. ಇನ್ನು ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಈ ಬಗ್ಗೆ ಎಜಿ ಜೊತೆ ಚರ್ಚೆ ಮಾಡುತ್ತೇನೆ. ಎಜಿ ಜೊತೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು. : - -,- – – -. .