ನಟ ಅಪ್ಪು ಸಮಾಧಿಗೆ ದೊಡ್ಮನೆ ಕುಟುಂಬದಿಂದ ಪೂಜೆ ಸಲ್ಲಿಕೆ: ಕಣ್ಣೀರಿಟ್ಟ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್. ಬೆಂಗಳೂರು,ಅಕ್ಟೋಬರ್,29,2022(..):ಇಂದು ನಟ ಪುನೀತ್ ರಾಜ್ ಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆಯಾಗಿದ್ದು ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಬಳಿ ಇರುವ ನಟ ಅಪ್ಪು ಸಮಾಧಿಗೆ ದೊಡ್ಮನೆ ಕುಟುಂಬ ಪೂಜೆ ಸಲ್ಲಿಕೆ ಮಾಡಿತು. ನಟ ಪುನೀತ್ ರಾಜ್ ಕುಮಾರ್ ಅವರಿಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಕೆ ಮಾಡಿದರು. ಮೊದಲು ಡಾ. ರಾಜ್ ಕುಮಾರ್ ಪಾರ್ವತಮ್ಮ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಅಪ್ಪು ಸಮಾಧಿಗೆ ಹಿರಿಯ ನಟ ರಾಘವೇಂಧ್ರ ರಾಜ್ ಕುಮಾರ್ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಟ ಪುನೀತ್ರ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಪೂರ್ಣಿಮಾ ಲಕ್ಷ್ಮೀ, ವಿನಯ್ ರಾಜ್ ಕುಮಾರ್ ಚಿನ್ನೇ ಗೌಡ , ಗೋವಿಂದರಾಜ್ ಅವರು ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಕೆ ವೇಳೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಣ್ಣೀರಿಟ್ಟರು. ಇನ್ನು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ದಂಡು ಸಮಾಧಿ ಬಳಿಗೆ ಆಗಮಿಸಿ ದರ್ಶನ ಪಡೆಯುತ್ತಿದ್ದು ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯುತ್ತಿದೆ. ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದರು. : –- - –- … . ’ ’ : , 29, 2022 (..): . . ’ . ’ . . . , , , ’ , , , , .’ . ’ . . . .: / 1st /