ದೀಪಾವಳಿ ಗಿಫ್ಟ್ ಜೊತೆ ಪತ್ರಕರ್ತರಿಗೆ ಲಂಚ ನೀಡಿದ ಆರೋಪ: ಸಿಎಂ ಬೊಮ್ಮಾಯಿ ರಾಜೀನಾಮೆಗೆ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹ. ನವದೆಹಲಿ,ಅಕ್ಟೋಬರ್,29,2022(..):ಸರ್ಕಾರದ ವಿರುದ್ಧ ದೀಪಾವಳಿ ಗಿಫ್ಟ್ ಜೊತೆ ಪತ್ರಕರ್ತರಿಗೆ ಲಂಚ ನೀಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು. ಕರ್ನಾಟಕ ಸರ್ಕಾರ ದೇಶದ ಅತ್ಯಂತ ಭ್ರಷ್ಟ ಸರ್ಕಾರ. ಕರ್ನಾಟಕದಲ್ಲಿ ಲಂಚ ನೀಡದಿದ್ದರೇ ಯಾವುದೇ ಕೆಲಸ ಆಗುವುದಿಲ್ಲ. ಅನುದಾನ ಪಡೆಯಲು ಸ್ವಾಮೀಜಿಗಳು ಕಮಿಷನ್ ಕೊಡಬೇಕಾಗಿದೆ. ಪಿಎಸ್ ಐ ನೇಮಕಾತಿಗಾಗಿ 80 ಲಕ್ಷ ಲಂಚ ಕೊಡಬೇಕಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ಪೋಸ್ಟಿಂಗ್ ಗೂ 80 ಲಕ್ಷ ಲಂಚ ಕೊಡಬೇಕು ಎಂದು ಆರೋಪಿಸಿದರು. ಸಿಎಂ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಕೇಸ್ ಹಾಕಬೇಕು. ಕಾಂಗ್ರೆಸ್ ಆಡಳಿತದ ವೇಳೆ ಪರ್ತಕರ್ತರಿಗೆ ಎಂದು ಹಣ ನೀಡಿಲ್ಲ. ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪವನ್ನ ತಿರಸ್ಕರಿಸುವೆ . ನಮ್ಮ ಸರ್ಕಾರ ಬಂದರೇ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದರು. ಸರ್ಕಾರದ ಭ್ರಷ್ಟಾಚಾರವನ್ನ ಬಯಲಿಗೆಳೆದು ‍ ಮಾಧ್ಯಮಗಳು ವರದಿ ಮಾಡುತ್ತಿವೆ. ಹೀಗಾಗಿ ಸರ್ಕಾರ ಮಾಧ್ಯಮಗಳಿಗೆ ಲಂಚ ನೀಡಲು ಪ್ರಯತ್ನಿಸುತ್ತಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಕಿಡಿಕಾರಿದರು. : - – –- - . … : . ’ , 29, 2022 (..): ’ ’ . , , “ . . . . . 80 ,” . . “ . . , ,” .“ . , . ,” .: / / / ./ /