ಭಾರತ್ ಜೋಡೋ ಯಾತ್ರೆ ಬಗ್ಗೆ ಬಿಜೆಪಿ ಟೀಕೆ: ಅಸೂಯೆಗೆ ಮದ್ಧಿಲ್ಲ ಎಂದ ಡಿ.ಕೆ ಶಿವಕುಮಾರ್. ಶಿವಮೊಗ್ಗ, ಅಕ್ಟೋಬರ್, 28,2022(..):ಭಾರತ್ ಜೋಡೋ ಯಾತ್ರೆ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವ ಕುಮಾರ್ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಭಾರತ್ ಜೋಡೋ ಯಾತ್ರೆಗೆ ಟೀಕೆ ಸಂಬಂಧ ಅಸೂಯೆಗೆ ಮದ್ದಿಲ್ಲ. ಬಿಜೆಪಿ ಇಂತಹ ಸಾಹಸಕ್ಕೆ ಕೈ ಹಾಕಿದ್ಯಾ..? ಬಿಜೆಪಿಯವರು ದೇಶಕ್ಕಾಗಿ ಪ್ರಾಣಾ ಕೊಟ್ಟಿದ್ದಾರಾ..? ಇಲ್ಲ ಬಡವರಿಗೆ ಮನೆ, ರೈತರಿಗೆ ಭೂಮಿ ಕೊಟ್ಟಿದ್ದಾರಾ..? ಬಿಜೆಪಿಗೆ ಶಕ್ತಿ ಬಂದಿದ್ದು ಪ್ರಜಾಪ್ರಭುತ್ವದಿಂದ. ಬಿಜೆಪಿಯವರು ಟೀಕೆ ಮಾಡಿಕೊಂಡೇ ಇರಲಿ. ನಾವು ಬಡವರ ಪರವಾಗಿಯೇ ಇರುತ್ತೇವೆ ಎಂದರು. ದೇಶದಲ್ಲಿ ಇಂದು ಬದಲಾವಣೆ ಅಗತ್ಯವಿದೆ. ಅದೇ ಕಾರಣಕ್ಕೆ ರಾಹುಲ್ ಗಾಂಧಿ ಅವರು ಇಂದು ಹೆಜ್ಜೆ ಹಾಕುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ನುಡಿದರು. : - - -