ಬೆಂಗಳೂರಿನಲ್ಲಿ ನವೆಂಬರ್ 5ರಂದು ‘ಮಸೀದಿ ಪ್ರವಾಸ’ ಕಾರ್ಯಕ್ರಮ ಬೆಂಗಳೂರು, ಅಕ್ಟೋಬರ್ 28, 2022 (..):ಬೆಂಗಳೂರಿನಲ್ಲಿ ನವೆಂಬರ್ 5ರಂದು ಸಂಜೆ 4ರಿಂದ ರಾತ್ರಿ 8ಗಂಟೆವರೆಗೆ‘ಮಸೀದಿ ಪ್ರವಾಸ’ ( ) ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಬೆನ್ಸನ್ ಟೌನ್ ನಲ್ಲಿರುವ ಮಿಲ್ಲರ್ ರಸ್ತೆಯ ಮಸ್ದೀಜ್-ಇ-ಖದ್ರಿಯಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 4ರಿಂದ ರಾತ್ರಿ 8ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ‘ಮಸೀದಿ ಟೂರ್’ ಕುರಿತ ಮಾರ್ಗದರ್ಶನ, ಇಸ್ಲಾಮಿಕ್ ವಸ್ತು ಪ್ರದರ್ಶನ, ಪ್ರಾರ್ಥನೆಯನ್ನು ನೇರವಾಗಿ ನೋಡುವ ಅವಕಾಶ ಜತೆಗೆ ಈ ಕುರಿತು ಪಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಅವಕಾಶವಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು 9845741752, 9620212876, 9590852385 ಸಂಪರ್ಕಿಸಬಹುದು.