ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ವಿಚಾರ ಹಾಗೂ ಕಾಂಗ್ರೆಸ್ ಬಸ್ ಯಾತ್ರೆ ಬಗ್ಗೆ ಸಚಿವ ಆರ್. ಅಶೋಕ್ ವ್ಯಂಗ್ಯ. ಬೆಂಗಳೂರು,ಅಕ್ಟೋಬರ್,25,2022(..):ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 80 ವರ್ಷದ ಮಲ್ಲಿಕಾರ್ಜುನ​ ಖರ್ಗೆ ಅವರನ್ನು ಕೂರಿಸಿದ್ಧಾರೆ. ಆದರೆ ಇವರ ಹಿಂದೆ ಸೋನಿಯಾ ಗಾಂಧಿ ಇದ್ದಾರೆ ಅಂತ ಗೊತ್ತಿದೆ. ಸ್ಟೇರಿಂಗ್ ಯಾರ ಬಳಿ ಇದೆ ಅಂತ ಗೊತ್ತಿದೆ. ಕಾಂಗ್ರೆಸ್ ನಾಯಕರು ರಿಮೋಟ್​ ಕಂಟ್ರೋಲ್​ ಗಾಡಿ ಇದ್ಧಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು. ರಾಜ್ಯ ಕಾಂಗ್ರೆಸ್​​​ ಬಸ್​ ಯಾತ್ರೆಯನ್ನು ಪ್ರಾರಂಭಿಸಲು ಮುಂದಾಗಿರುವ ಕುರಿತು ಮಾತನಾಡಿದ ಸಚಿವ ಆರ್​. ಅಶೋಕ್, ಕಾಂಗ್ರೆಸ್ ಕೊನೆ ಮೊಳೆಯನ್ನು ಕರ್ನಾಟಕದಲ್ಲಿ ಹೊಡೆಯುತ್ತದೆ. ಕಾಂಗ್ರೆಸ್ ಈಗಾಗಲೇ ಮುಳುಗುತ್ತಿದೆ. ಅವರು ಬಸ್ಸಲ್ಲಾದ್ರೂ ಯಾತ್ರೆ ಮಾಡಲಿ, ಟ್ರೈನಲ್ಲಾದರೂ ಯಾತ್ರೆ ಮಾಡಲಿ. ಪ್ಲೇನ್ ನಲ್ಲಾದರೂ ಯಾತ್ರೆ ಮಾಡಲಿ ಜನರಂತು ಮರುಳಾಗಲ್ಲ ಎಂದು ಕಾಲೆಳೆದರು. ಬಿಜೆಪಿ , ಮೀಸಲಾತಿ ಪ್ರಮಾಣ ಹೆಚ್ಚಿಸುವ ಕೆಲಸ ಮಾಡಿದೆ. ನ್ಯಾ. ನಾಗಮೋಹನ ದಾಸ್​ ಸಮಿತಿ ಮಾಡಿದ್ದು ವಿಪಾಕ್ಷ ನಾಯಕ ಸಿದ್ದರಾಮಯ್ಯ ಅಲ್ಲ, ಹೆಚ್.ಡಿ ಕುಮಾರಸ್ವಾಮಿ ಸಮಿತಿ ಮಾಡಿದ್ದು, ಸಿದ್ದರಾಮಯ್ಯನವರ ನಾಟಕ ಕಂಪನಿಯ ಬಣ್ಣ ಬಯಲಾಗಿದೆ. ಬಸ್ಕಿ ಹೊಡೆಯೋದು ಕೈಹಿಡಿದು ಓಡೋದನ್ನು ಮಾಡಿದ್ದಾರೆ, ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಎಣ್ಣೆ-ಸೀಗೆಕಾಯಿ ರೀತಿ ಎಂದು ಕುಟುಕಿದರು. ಶಿವಮೊಗ್ಗದಲ್ಲಿ ನಡೆದ ಗಲಾಟೆ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಕೇಂದ್ರ ಸರ್ಕಾರ ಪಿಎಫ್ ​ಐ ಬ್ಯಾನ್ ಮಾಡಿದೆ. ಅದೇ ರೀತಿ ಕೆಎಫ್​​ ಡಿಯನ್ನು ಬ್ಯಾನ್ ಮಾಡಬೇಕು. ಕಿಡಿಗೇಡಿಗಳನ್ನು ಮುಲಾಜಿಲ್ಲದೆ ಮಟ್ಟ ಹಾಕುತ್ತೇವೆ. ಯಾರೇ ಇದ್ದರು ಮಟ್ಟ ಹಾಕುತ್ತೇವೆ ಎಂದು ಹೇಳಿದರು. : -. - – -