ಸುಮಾರು 36 ಸರಗಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಸರಗಳ್ಳನ ಬಂಧನ. ಬೆಂಗಳೂರು,ಅಕ್ಟೋಬರ್,25,2022(..):ಸುಮಾರು 36 ಸರಗಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನ ಬೆಂಗಳೂರಿನ ತಿಲಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಖ್ಯಾತ ಸರಗಳ್ಳ ಸೈಯದ್ ಪರ್ವೇಜ್ ಬಂಧಿತ ಆರೋಪಿ. ಬಂಧಿತನಿಂಧ 92 ಗ್ರಾಂ ತೂಕದ 2 ಚಿನ್ನದ ಸರಗಳನ್ನ ವಶಕ್ಕೆ ಪಡೆಯಲಾಗಿದೆ. ಈತ ಸುಮಾರು 36 ಸರಗಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ. ಎನ್ನಲಾಗಿದೆ. ಆರೋಪಿ ಸೈಯದ್ ಮನೆಯಲ್ಲಿ ಯಾರು ಇಲ್ಲದ ವೇಳೆ ನುಗ್ಗಿ ಚಿನ್ನದ ಸರ ಕದಿಯುತ್ತಿದ್ದ. ಪ್ರಕರಣ ಸಂಬಂಧ ತಿಲಕ್ ನಗರ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. : – – – 36 -