ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಶಾಸಕ ಜಿ.ಟಿ ದೇವೇಗೌಡ…? ಮೈಸೂರು,ಅಕ್ಟೋಬರ್,21,2022(..):ಜೆಡಿಎಸ್ ಜೊತೆ ಮುನಿಸಿಕೊಂಡು ಪಕ್ಷದ ತೊರೆಯಲು ಮುಂದಾಗಿದ್ಧ ಶಾಸಕ ಜಿಟಿ ದೇವೇಗೌಡರನ್ನ ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಖುದ್ಧು ಅಖಾಡಕ್ಕಿಳಿದು ಮನವೊಲಿಸಿದ್ದಾರೆ. ಈ ಮಧ್ಯೆ ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನಡೆಸಿದ ಸಂದಾನ ಯಶ್ವಸಿಯಾಗಿದ್ದು ಜಿಟಿ ದೇವೇಗೌಡರು ಜೆಡಿಎಸ್ ನಲ್ಲೇ ಉಳಿದಿದ್ದಾರೆ. ಇನ್ನೂ ಮೈಸೂರು ಚುನಾವಣಾ ಉಸ್ತುವಾರಿಯನ್ನ ಜಿ.ಟಿ ದೇವೇಗೌಡರಿಗೆ ನೀಡಲಾಗಿದೆ. ಈ ನಡುವೆ ಇಂದು ಚಾಮುಂಡಿ ಬೆಟ್ಟದಲ್ಲಿ ಶಾಸಕ ಜಿ.ಟಿ ದೇವೇಗೌಡರು ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ್ದಾರೆ ಎನ್ನಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡರು, ಹುಣಸೂರು ಕ್ಷೇತ್ರದಿಂದ ಹರೀಶ್ ಗೌಡ, ಕೆಆರ್ ನಗರ ಶಾಸಕ ಸಾ.ರಾ ಮಹೇಶ್. ಪಿರಿಯಾಪಟ್ಟಣ ಕೆ.ಮಹದೇವ್ , ಟಿ.ನರಸೀಪುರದಿಂದ ಅಶ್ವಿನ್, ಹೆಚ್.ಡಿ ಕೋಟೆಯಿಂದ ಜಯಪ್ರಕಾಶ್ ಸ್ಪರ್ಧೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. : - - – – – … .. , 21, 2022 (..): .. .. . , .. . . .. . .. , , .. .. , . , . , .. .: / .. / / /