ಇಂದು ಪುನೀತ ಪರ್ವ ಕಾರ್ಯಕ್ರಮ : ಲಕ್ಷಾಂತರ ಅಭಿಮಾನಿಗಳು, ಗಣ್ಯರು ಭಾಗಿ ಸಾಧ್ಯತೆ. ಬೆಂಗಳೂರು,ಅಕ್ಟೋಬರ್,21,2022(..):ನಟ ದಿ.ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ವರ್ಷ ತುಂಬುತ್ತಿದೆ. ಈ ಮಧ್ಯೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ ಪರ್ವ ಕಾರ್ಯಕ್ರಮ ಆಯೋಜಿಸಲಾಗಿದೆ. ಅಕ್ಟೋಬರ್ 28ರಂದು ‘ಗಂಧದ ಗುಡಿ ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದ್ದು, ಅದರ ಪ್ರೀ-ರಿಲೀಸ್ ಇವೆಂಟ್​ಗೆ ‘ಪುನೀತ ಪರ್ವ’ ಎಂದು ಹೆಸರು ಇಡಲಾಗಿದೆ. ಇಂದು ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ಸಂಜೆ 6.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳು, ಸೆಲೆಬ್ರಿಟಿಗಳು, ಗಣ್ಯರು ಭಾಗಿಯಾಗಲಿದ್ದಾರೆ. 1.50 ಲಕ್ಷ ಜನರು ನಿಂತು ಕಾರ್ಯಕ್ರಮವನ್ನ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ, ಹೆಚ್ಚು ಪೊಲೀಸ್ ಭದ್ರತೆ ನೀಡಲಾಗುತ್ತಿದೆ. ಪುನೀತ ಪರ್ವ ಕಾರ್ಯಕ್ರಮಕ್ಕೂ ಮುನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಇಂದು ಪುನೀತ್ ಕುಮಾರ್ ಸಮಾದಿಗೆ ಪೂಜೆ ಸಲ್ಲಿಸಿದರು. : – –-