ನಿರಂತರ ಮಳೆಯಿಂದ ಸಮಸ್ಯೆ: ಸಮರೋಪಾದಿಯಲ್ಲಿ ರಸ್ತೆಗುಂಡಿ ಮುಚ್ಚಲು ಸೂಚನೆ- ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರು,ಅಕ್ಟೋಬರ್,20,2022(..):ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗುಂಡಿ ಮುಚ್ಚಲು ಸಮಸ್ಯೆಯಾಗುತ್ತಿದೆ. ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಸೂಚನೆ ನೀಡಿದ್ಧೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರಿನ ಬಗ್ಗೆ ಬೇರೆ ರೀತಿ ವ್ಯಾಖ್ಯಾನ ಮಾಡಲಾಗುತ್ತಿದೆ. ಮಳೆಯಿಂದ ಪ್ರವಾಹ ಸೃಷ್ಠಿಯಾಗಿತ್ತು. ಆದರೆ ಬೆಂಗಳೂರು ಮುಳುಗಿದೆ ಅಂತಾ ಬಿಂಬಿಸಿದರು. ಮಳೆ ಕಡಿಮೆಯಾದರೇ ಗುಂಡಿ ಮುಚ್ಛಬಹುದು ಈಗಾಗಲೇ ಬಿಬಿಎಂಪಿ ಕಮಿಷನರ್ ಗೆ ಸೂಚನೆ ನೀಡಿದ್ಧೇನೆ. ಮಳೆ ಬೀಳುವಾಗ ಗುಂಡಿಮುಚ್ಚಿದ್ರೆ ಮತ್ತೆ ಹಾಳಾಗುತ್ತದೆ. ನಿರಂತರ ಮಳೆಯಿಂದ ಸಮಸ್ಯೆಯಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. : - – -- - .