ಗಂಡನಿಂದಲೇ ಪತ್ನಿ ಮತ್ತು ಮಗುವಿನ ಹತ್ಯೆ: ಆರೋಪಿ ಬಂಧನ. ತುಮಕೂರು,ಅಕ್ಟೋಬರ್,19,2022(..):ಕೌಟುಂಬಿಕ ಕಲಹ ಹಿನ್ನೆಲೆ ಪತಿಯೇ ತನ್ನ ಪತ್ನಿ ಮತ್ತು ಮಗುವನ್ನ ಹತ್ಯೆಗೈದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕೊಂಡ್ಲಿಯ ಮಾವಿನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸ್ವಾಮಿ ಎಂಬಾತನೇ ಈ ಕೃತ್ಯವೆಸಗಿರುವುದು. ಆತನ ಪತ್ನಿ ಕವಿತಾ(24) ಹಾಗೂ 3 ವರ್ಷದ ಮಗು ಹತ್ಯೆಯಾದವರು. ಆರೋಪಿ ಸ್ವಾಮಿ ಹಾರೆಯಿಂದ ಪತ್ನಿ ಕವಿತ ಮತ್ತು ಮಗುವಿಗೆ ಹೊಡೆದು ಹತ್ಯೆಗೈದಿದ್ದಾನೆ. ಬಳಿಕ ಆತನನ್ನ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. : – –- -- .