ಲಂಬಾಣಿ ತಾಂಡ ಕುರುಬರ ಹಟ್ಟಿಗಳಿಗೆ ಕಂದಾಯ ಗ್ರಾಮಗಳು ಎಂದು ದಾಖಲೆ ನೀಡಲು ನಿರ್ಧಾರ- ಸಚಿವ ಆರ್.ಅಶೋಕ್. ಬೆಂಗಳೂರು,ಅಕ್ಟೋಬರ್,17,2022(..): ಲಂಬಾಣಿ ತಾಂಡ ಕುರುಬರ ಹಟ್ಟಿಗಳಿಗೆ ಕಂದಾಯ ಗ್ರಾಮಗಳು ಎಂದು ದಾಖಲೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಲಂಬಾಣಿ ತಾಂಡಗಳಲ್ಲಿ ಕಂದಾಯ ದಾಖಲೆ ಇಲ್ಲದ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಅರಣ್ಯ ಜಮೀನುಗಳ ಬಗ್ಗೆಯೂ ಚರ್ಚೆಯಾಗಿದೆ. ಲಂಬಾಣಿ ತಾಂಡ ಕುರುಬರ ಹಟ್ಟಗಳಿಗೆ ಕಂದಾಯ ಗ್ರಾಮಗಳು ಎಂಬ ದಾಖಲೆಗಳನ್ನ ನೀಡಲು ತೀರ್ಮಾನಿಸಲಾಗಿದೆ. ಸಾಗುವಳಿ ಮಾಡುತ್ತಿರುವವರಿಗೆ ಅರಣ್ಯ ಭೂಮಿ ನೀಡುವ ಬಗ್ಗೆ ಚರ್ಚೆ . ಡಿಮ್ಡ್ ಅರಣ್ಯ ಭೂಮಿ ನೀಡುವ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ ಅಯಾ ತಹಶೀಲ್ದಾರ್ ಗಳಿಗೆ ಅಧಿಕಾರ ನೀಡಲಾಗಿದೆ. ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳು ಸೂಚನೆ ನೀಡಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು. : – – – -- .