ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ: 6 ಮಂದಿ ದುರ್ಮರಣ. ಕೇದಾರನಾಥ, ಅಕ್ಟೋಬರ್,18,2022(..):ಹವಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಪತನಗೊಂಡು 6 ಮಂದಿ ಸಾವನ್ನಪ್ಪಿರುವ ಘಟನೆ ಕೇದಾರನಾಥ ಬಳಿ ನಡೆದಿದೆ. ಕೇದಾರನಾಥ ಬಳಿ 2 ಕಿ.ಮೀ ದೂರದಲ್ಲಿನ ಗರುಡಚಟ್ಟಿ ಬಳಿ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ ನಲ್ಲಿದ್ದ 8 ಮಂದಿ ಪೈಕಿ 6 ಮಂದಿ ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್ ಯಾತ್ರಿಕರನ್ನ ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಹವಮಾನ ವೈಪರಿತ್ಯ ಹಿನ್ನೆಲೆ ಪತನವಾಗಿದ್ದು ಮೃತಪಟ್ಟವರಲ್ಲಿ ಇಬ್ಬರು ಪೈಲೆಟ್ ಗಳು ಸೇರಿದ್ದಾರೆ. ಘಟನಾಸ್ಥಳಕ್ಕೆ ಎಸ್ ಡಿಆರ್ ಎಫ್, ಪೊಲೀಸರು ದೌಡಾಯಿಸಿದ್ದಾರೆ. : - - - 6 … 6 , 18, 2022 (..): , , . , 2 . . . , . . .: / /