ಬಳ್ಳಾರಿಯಲ್ಲಿ ಇಂದು ಭಾರತ್ ಜೋಡೋ ಯಾತ್ರೆ: ಪೊಲೀಸ್ ಬಿಗಿ ಭದ್ರತೆ. ಬಳ್ಳಾರಿ,ಅಕ್ಟೋಬರ್ ,15,2022(..):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ಬಳ್ಳಾರಿಯಲ್ಲಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ. ಪಾದಯಾತ್ರೆ ಬಳಿಕ ಬಳ್ಳಾರಿಯಲ್ಲಿ ಸಮಾವೇಶ ನಡೆಯಲಿದ್ದು, ಬಿಗಿ ಭದ್ರತೆಗಾಗಿ 351 ಪೊಲೀಸ್ ಅಧಿಕಾರಿಗಳು, 1704 ಕಾನ್ಸ್ ಟೇಬಲ್ಸ್ ಗಳು, 450 ಗೃಹರಕ್ಷಕ ದಳದ ಸಿಬ್ಬಂದಿ, 5 ಕೆಎಸ್ ಆರ್ ಪಿ ತುಕಡಿ, 3 ಎಎಸ್ ಪಿ 10 ಡಿವೈಎಸ್ ಪಿ 37 ಸಿಪಿಐ ಮತ್ತು 100 ಹೆ್ಚ್ಚು ಪಿಎಸ್ ಐಗಳನ್ನ ನಿಯೋಜಿಸಲಾಗಿದೆ. ವಿಜಯನಗರ, ಕೊಪ್ಪಳ, ರಾಯಚೂರು, ಗದಗದಿಂದ ಭದ್ರತೆಗೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದಾರೆ. : - – - - .