ಭಾರತ್ ಜೋಡೋ ಯಾತ್ರೆಯನ್ನ ಫ್ಯಾಮಿಲಿ ಪ್ಯಾಕ್ ಪಾದಯಾತ್ರೆ ಎಂದು ಟೀಕಿಸಿದ ಸಚಿವ ಆರ್.ಅಶೋಕ್. ರಾಯಚೂರು,ಅಕ್ಟೋಬರ್,15,2022(..):ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯನ್ನ ಫ್ಯಾಮಿಲಿ ಪ್ಯಾಕ್ ಪಾದಯಾತ್ರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ. ರಾಯಚೂರಿನಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಫ್ಯಾಮಿಲಿ ಪ್ಯಾಕ್ ಪಾದಯಾತ್ರೆ ಸಿದ್ದರಾಮಯ್ಯ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದರು. ಸಿದ್ದರಾಮಯ್ಯ ಪಾದಯಾತ್ರೆಗೆ ಸೋನಿಯಾ ಬಂದಿದ್ರಾ‌? ಡಿ.ಕೆ ಶಿವಕುಮಾರ್ ಪಾದಯಾತ್ರೆ ಮಾಡಿದರು. ಡಿ.ಕೆ.ಶಿವಕುಮಾರ್​​ ಪಾದಯಾತ್ರೆಗೆ ಯಾರು ಬಂದ್ರು? ಹಸು, ಕರು ಗುರುತು ಮತ್ತೆ ಬಂದಿದೆ ಎಂದು ವ್ಯಂಗ್ಯವಾಡಿದರು. ಸೋರುತಿಹುದು ಕಾಂಗ್ರೆಸ್ ಮನೆಯ ಮಾಳಿಗೆ. ಒಂದು ದಿನ ಫ್ಯಾಮಿಲಿ ಬಿಟ್ಟು ಜನರ ಜೊತೆಗೆ ನಿಂತಿಲ್ಲ. ಅವರ ಕಾಲದ 20 ಸಚಿವರು ಕೇಸ್​ ನಲ್ಲಿ ಅಲೆದಾಡ್ತಿದ್ದಾರೆ ಎಂದು ಸಚಿವ ಅಶೋಕ್ ಲೇವಡಿ ಮಾಡಿದರು. ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನ ಪೀಠದಿಂದ ಕೆಳಗಿಳಿಸುವ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ನಿನ್ನೆ ಮಠದ ಮುಖ್ಯಸ್ಥರು ಭಕ್ತರು ಸಿಎಂ ಭೇಟಿಯಾಗ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ ಏನಮಾಡಬೇಕು ಎಂದು ಸಲಹೆ ಕೊಟ್ಟಿದ್ದಾರೆ. ಪೀಠಕ್ಕೆ ಸಂಬಂಧಿಸಿದಂತೆ ಸಿಎಂ ಚರ್ಚೆ ಮಾಡಿದ್ದಾರೆ. ಈ ಕುರಿತು ಸಿಎಂ ಬೊಮ್ಮಾಯಿ ತೀರ್ಮಾನ ಮಾಡಲಿದ್ದಾರೆ ಎಂದರು. : - . - – – - .