ಮದುವೆ ಬಳಿಕ ‘ಹೆಡ್ ಬುಷ್’ ಮೂಲಕ ಬೆಳ್ಳಿ ತೆರೆಗೆ ಬಂದ ಶ್ರುತಿ ಹರಿಹರನ್ ಬೆಂಗಳೂರು, ಅಕ್ಟೋಬರ್ 13, 2022 (..):ನಟಿ ಶ್ರುತಿ ಹರಿಹರನ್ ಚಿಕ್ಕ ಗ್ಯಾಪ್​ ಬಳಿಕ ಮತ್ತೆ ಹಿರಿ ತೆರೆಗೆ ಬಂದಿದ್ದಾರೆ. ಹೌದು. ಮದುವೆ ಬಳಿಕ ‘ಹೆಡ್​ ಬುಷ್​’ ಚಿತ್ರದಲ್ಲಿ ಶ್ರುತಿ ಹರಿಹರನ್ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಡಾಲಿ ಧನಂಜಯ್​ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಹೆಡ್​ ಬುಷ್​’ ಚಿತ್ರದಲ್ಲಿ ಶ್ರುತಿ ಹರಿಹರನ್​ ನಟಿಸಿದ್ದಾರೆ. ಜತೆಗೆ ಮದುವೆಯು ತಮ್ಮ ವೃತ್ತಿಜೀವನದ ಮೇಲೆ ಏನೂ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ. ಮಗು ಜನಿಸಿದ ಬಳಿಕ ಜೀವನದಲ್ಲಿ ಬದಲಾವಣೆ ಆಯ್ತು. ಸಿನಿಮಾ ಮಾಡುವಾಗ ನನ್ನ ಅರ್ಧ ಮನಸ್ಸು ಮಗು ಕಡೆಗೆ ಇರುತ್ತದೆ’ ಎಂದು ಶೃತಿ ಹರಿಹರನ್ ಹೇಳಿಕೊಂಡಿದ್ದಾರೆ.