ಐಎಂಡಿಬಿ ರೇಟಿಂಗ್’ನಲ್ಲೂ’ಕಾಂತಾರ’ ಕಮಾಲ್ ! ಬೆಂಗಳೂರು, ಅಕ್ಟೋಬರ್ 12, 2022 (..): ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಸಿನಿಮಾ ಐಎಂಡಿಬಿ ರೇಟಿಂಗ್​ನಲ್ಲೂ ಮಿಂಚಿದೆ. ಹೌದು. ಸದ್ಯ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಎಲ್ಲ ಭಾಷೆಗಳ ಹಾಟ್ ಫೇವರೇಟ್ ಆಗಿರುವ ಕಾಂತಾರ ಚಿತ್ರ ಐಎಂಡಿಬಿಯಲ್ಲಿ 10ಕ್ಕೆ 9.6 ಅಂಕ ಪಡೆದುಕೊಂಡಿದೆ. ಸುಮಾರು 12 ಸಾವಿರ ಜನರು ವೋಟ್​ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೇಟಿಂಗ್​ನಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಇನ್ನು ‘ಕಾಂತಾರ’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಸಾಲು ಸಾಲು ರಜೆ ಸಿಕ್ಕಿದ್ದು ಚಿತ್ರಕ್ಕೆ ವರದಾನ ಆಗಿದೆ. ಈ ಚಿತ್ರದ ಕಲೆಕ್ಷನ್ ಎಷ್ಟು ಎಂಬುದರ ಪಕ್ಕಾ ಲೆಕ್ಕದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಹಿಂದಿಯಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ. ಈ ಸಿನಿಮಾದಿಂದ ಹೊಂಬಾಳೆ ಫಿಲ್ಮ್ಸ್ ಭರಪೂರ ಲಾಭ ಕಂಡಿದೆ.