ಕಟ್ಟಡ ಕುಸಿದು ಇಬ್ಬರು ಸಾವು: ಮೂವರಿಗೆ ಗಂಭೀರ ಗಾಯ. ಬೆಂಗಳೂರು,ಅಕ್ಟೋಬರ್,11,2022(..):ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ವೈಟ್ ಫಿಲ್ಡ್ ಬಳಿಯ ಹೂಡಿಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಜೈನುದ್ಧಿನ್ ಹರಮಾನ್ ಮೃತಪಟ್ಟ ಕಾರ್ಮಿಕರು. ಮೂವರಿಗೆ ಗಂಭಿರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಆರ್ ಎಲ್ ಕಂಪನಿಯ ಕಟ್ಟಡ ತೆರುವು ಗೊಳಿಸುವ ಕಾರ್ಯ ನಡೆಯುತ್ತಿತ್ತು. ಮಳೆ ಹಿನ್ನೆಲೆ ಕಾರ್ಮಿಕರು ಕಟ್ಟಡ ಒಳಗೆ ಮಲಗಿದ್ದರು. ಈ ನಡುವೆ ರಾತ್ರಿ ಮಳೆಗೆ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. : - – --