, ಒಳ ಮೀಸಲಾತಿಗೆ ಸುಪ್ರೀಂಕೋರ್ಟ್ ಒಪ್ಪಿಗೆ ನವದೆಹಲಿ, ಆಗಸ್ಟ್, 1, 2024 (..):ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಳ ಮೀಸಲಾತಿಯಿಂದ ಸಮಾನತೆಗೆ ಧಕ್ಕೆಯಾಗಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಏಳು ನ್ಯಾಯಾಧೀಶರ ಪೀಠದಲ್ಲಿ 6:1 ಬಹುಮತದಿಂದ ಎಸ್.ಸಿ, ಎಸ್ ಟಿ ಒಳ ಮೀಸಲಾತಿಗೆ ಒಪ್ಪಿಗೆ ನೀಡಲಾಗಿದೆ. 7 ನ್ಯಾಯಮೂರ್ತಿಗಳ ಪೈಕಿ ನ್ಯಾ. ಬೇಲಾ ತ್ರಿವೇದಿ ಅವರು ಮಾತ್ರ ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದು , ಉಳಿದ 6 ನ್ಯಾಯಮೂರ್ತಿಗಳು ಒಳ ಮೀಸಲಾತಿ ಪರ ತೀರ್ಪು ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ವರ್ಗೀಕರಣಕ್ಕೆ ಅವಕಾಶವಿದೆ . ಒಳ ಮೀಸಲಾತಿಯಿಂದ ಸಮಾನತೆಯ ನಿಯಮ ಉಲ್ಲಂಘನೆಯಾಗಲ್ಲ. ಎಸ್ ಸಿ ಎಸ್ ಟಿ ಒಳ ಮೀಸಲಾತಿಯಿಂದ ಸಮಾನತೆಗೆ ಧಕ್ಕೆ ಇಲ್ಲ. ಉಪ ಪಂಗಡಗಳ ಮೀಸಲಾತಿಯಿಂದ ಸಮಾನತೆಗೆ ಸಮಸ್ಯೆ ಇಲ್ಲ. ಒಳ ಮೀಸಲಾತಿ ಕಾನೂನು ಬದ್ಧ ಎಂದು ಸುಪ್ರೀಂಕೋರ್ಟ್ ನ್ಯಾಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. : , , ,