ಕಾಲಿವುಡ್ ಮೂಲಕ ಸಿನಿಮಾ ನಿರ್ಮಾಣ ಶುರು ಮಾಡಿದ ಧೋನಿ! ಬೆಂಗಳೂರು, ಅಕ್ಟೋಬರ್ 10, 2022 (..):ಧೋನಿ ಎಂಟರ್‌ಟೈನ್‌ಮೆಂಟ್ ಎಂಬ ಪ್ರೊಡಕ್ಷನ್ ಹೌಸ್’ನಿಂದ ಹೊರ ಸುದ್ದಿ ಹೊರ ಬಿದ್ದಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಸಿನಿಮಾ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್ ಕಂಪೆನಿಯು ಆರಂಭದಲ್ಲಿ ಕೇವಲ ಮೂರು ಭಾಷೆಗಳಲ್ಲಿ ಮಾತ್ರ ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ. ಕಾಲಿವುಡ್ ಮೂಲಕವೇ ಧೋನಿ ಹೊಸ ಇನಿಂಗ್ಸ್ ಆರಂಭಿಸುವುದು ಖಚಿತ. ಇದಲ್ಲದೆ ತೆಲುಗು ಹಾಗೂ ಮಲಯಾಳಂ ಚಿತ್ರಗಳನ್ನೂ ಕೂಡ ನಿರ್ಮಿಸಲಿದೆ. ಆರಂಭದಲ್ಲಿ ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಸಿನಿಮಾ ನಿರ್ಮಿಸಲು ಧೋನಿ ಎಂಟರ್‌ಟೈನ್‌ಮೆಂಟ್ ಕಂಪೆನಿ ಮುಂದಾಗಿದೆ.